ಮೆಕ್ಸಿಕೋ: ಕಾರ್ ರೇಸ್ ವೇಳೆ ನಡೆದ ಶೂಟೌಟ್ ನಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ (ಮೇ.20 ರಂದು) ನಡೆದಿರುವುದು ವರದಿಯಾಗಿದೆ.
ಬಾಜಾ ಕ್ಯಾಲಿಫೋರ್ನಿಯಾ ಸ್ಟೇಟ್ ಅಟಾರ್ನಿ ಜನರಲ್ ಕಚೇರಿಯ ಪ್ರಕಾರ, ಎನ್ಸೆನಾಡಾ ನಗರದ ಸ್ಯಾನ್ ವಿಸೆಂಟೆ ಪ್ರದೇಶದಲ್ಲಿ ಆಲ್-ಟೆರೈನ್ ಕಾರ್ ರೇಸಿಂಗ್ ವೇಳ ಈ ಘಟನೆ ನಡೆದಿದೆ.
ವ್ಯಾನ್ ವೊಂದರಲ್ಲಿ ಬಂದ ಬಂದೂಕುಧಾರಿಗಳು ಕಾರ್ ರೇಸ್ ನಲ್ಲಿ ಭಾಗವಹಿಸಿದವರ ಏಕಾಏಕಿ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿದ್ದು, 9 ಮಂದಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.
ರಾಜ್ಯ ಅಟಾರ್ನಿ ಜನರಲ್ ರಿಕಾರ್ಡೊ ಇವಾನ್ ಕಾರ್ಪಿಯೊ ಸ್ಯಾಂಚೆಝ್ ಅವರು ಶೂಟೌಟ್ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ನಿಯೋಜಿಸಿದ್ದಾರೆ ಎಂದು ಮೇಯರ್ ಅರ್ಮಾಂಡೋ ಅಯಾಲಾ ರೋಬಲ್ಸ್ ಹೇಳಿದ್ದಾರೆ.
Related Articles
ಮೃತಪಟ್ಟವರು ಗುರುತ ಅಥವಾ ರಾಷ್ಟ್ರೀಯತೆಯನ್ನು ಇನ್ನು ಕೂಡ ಬಹಿರಂಗಪಡಿಸಿಲ್ಲ ಎಂದು ವರದಿ ತಿಳಿಸಿದೆ.