Advertisement

UP BJP;ಲೋಕ ಚುನಾವಣೆ ಹಿನ್ನಡೆಗೆ 10 ಕಾರಣ!: 15 ಪುಟದ ವರದಿ

12:53 AM Jul 19, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸುವಲ್ಲಿ ಬಿಜೆಪಿ ವಿಫ‌ಲವಾಗಿದ್ದೇಕೆ ಎಂಬ ಬಗ್ಗೆ ಆತ್ಮಾವಲೋಕನ ನಡೆದಿದ್ದು, ಪಕ್ಷ ಮತ್ತು ಸರಕಾರದ ಮೇಲೆ ಅಧಿಕಾರಿಗಳ ಬಿಗಿ ಹಿಡಿತ, ಪೇಪರ್‌ ಲೀಕ್‌, ಕಾರ್ಯಕರ್ತರ ನಿರಾ ಸಕ್ತಿ, ಸಂವಿಧಾನ ಬದಲಾವಣೆ ಆರೋಪ ಸೇರಿದಂತೆ ಹಲವು ಕಾರಣಗಳನ್ನು ಒಳಗೊಂಡ 15 ಪುಟಗಳ ವರದಿಯನ್ನು ಉತ್ತರ ಪ್ರದೇಶ ಘಟಕ ಸಿದ್ಧಪಡಿಸಿದೆ ಎನ್ನಲಾಗಿದೆ.

Advertisement

ಉ.ಪ್ರ. ಆರೂ ವಿಭಾಗಗಳಲ್ಲಿ ಬಿಜೆಪಿಗೆ ಶೇ.8ರಷ್ಟು ಮತ ಪ್ರಮಾಣ ಕಡಿಮೆಯಾಗಿದೆ. ಕುರ್ಮಿ, ಮೌರ್ಯ ಜಾತಿ ಮತಗಳು ಈ ಬಾರಿ ಬಿಜೆಪಿಯಿಂದ ದೂರ ಸರಿದಿವೆ. ಜತೆಗೆ, ಬಿಎಸ್‌ಪಿಗೆ ಖೋತಾ ಆದ ಶೇ.10 ಮತಗಳು ಬಿಜೆಪಿಗೆ ಬರುವ ಬದಲು ಕಾಂಗ್ರೆಸ್‌ ಮತ್ತು ಅದರ ಮೈತ್ರಿಪಕ್ಷಗಳ ಪಾಲಾಗಿವೆ ಎಂಬ ಮಾಹಿತಿಯನ್ನು ಉಲ್ಲೇಖೀಸಲಾಗಿದೆ.
ಪಕ್ಷ ಹಾಗೂ ಸರಕಾರದ ಮೇಲೆ ಅಧಿಕಾರಿಗಳು ಸಂಪೂರ್ಣವಾಗಿ ಹಿಡಿತ ಸಾಧಿಸಿದ್ದು ಕೂಡ ಹಿನ್ನಡೆಗೆ ಕಾರಣವಾಯಿತು. ಪಕ್ಷದ ಕಾರ್ಯಕರ್ತರ ಅಳಲನ್ನು ಸರಕಾರದ ಮಟ್ಟದಲ್ಲಿ ಕೇಳುವ ವ್ಯವಸ್ಥೆಯೇ ಇರಲಿಲ್ಲ.

ಬಿಜೆಪಿ 400 ಸೀಟು ಗೆದ್ದರೆ ಸಂವಿಧಾನ ಬದಲಾವಣೆ ಮಾಡಲಿದೆ ಎಂಬ ಆರೋಪಕ್ಕೆ ಬಿಜೆಪಿ ಸರಿಯಾದ ರೀತಿಯಲ್ಲಿ ಉತ್ತರ ನೀಡಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯದಲ್ಲಿನ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ವಿಫ‌ಲವಾಗಿದ್ದು, ಬಿಜೆಪಿಗೆ ಬಹುದೊಡ್ಡ ಹಿನ್ನಡೆಗೆ ಕಾರಣವಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಗೆ ಪ್ರಮುಖ ಅಂಶಗಳು

ಸರಕಾರ ಮತ್ತು ಪಕ್ಷದ ಮೇಲೆ ಸರಕಾರಿ ಆಡಳಿತದ ಬಿಗಿ ಹಿಡಿತ
ಉ.ಪ್ರ.ದ ಆರೂ ವಲಯಗಳಲ್ಲಿ ಬಿಜೆಪಿಗೆ ಒಟ್ಟು ಶೇ.8ರಷ್ಟು ಮತ ನಷ್ಟ
ಬಿಜೆಪಿಯಿಂದ ದೂರ ಸರಿದ ಕುರ್ಮಿ ಮತ್ತು ಮೌರ್ಯ ಜಾತಿ ಮತಗಳು
ಪೂರ್ಣ ಪ್ರಮಾಣದಲ್ಲಿ ದಲಿತ ಮತಗಳು ಬಿಜೆಪಿಗೆ ಹರಿದು ಬರಲಿಲ್ಲ
ಬಿಎಸ್‌ಪಿಗೆ ಖೋತಾ ಆದ ಶೇ.10 ಮತಗಳು ಕಾಂಗ್ರೆಸ್‌ ಮೈತ್ರಿಕೂಟ ಪಾಲು
400 ಸೀಟು ಗೆದ್ದರೆ ಸಂವಿಧಾನ ಬದಲಾವಣೆ ಆರೋಪಕ್ಕೆ ತಿರುಗೇಟು ನೀಡುವಲ್ಲಿ ವಿಫ‌ಲ
ಕೆಲವು ವರ್ಷಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವಲ್ಲಿ ಸರಕಾರ ವಿಫ‌ಲವಾಗಿರುವುದು
ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ಅಳಲು ಕೇಳುವ ವ್ಯವಸ್ಥೆಯ ಕೊರತೆ
ಬಹುತೇಕ ಕ್ಷೇತ್ರಗಳಲ್ಲಿ 30ರಿಂದ 40 ಸಾವಿರ ಕಟ್ಟಾ ಬಿಜೆಪಿ ಮತದಾರರ ಹೆಸರು ಕಾಣೆ
ಪಶ್ಚಿಮ ಯುಪಿ ಮತ್ತು ಕಾಶಿ ವಿಭಾಗದಲ್ಲಿ ಬಿಜೆಪಿಯಿಂದ ಭಾರೀ ಕಳಪೆ ಪ್ರದರ್ಶನ

Advertisement
Advertisement

Udayavani is now on Telegram. Click here to join our channel and stay updated with the latest news.

Next