Advertisement

ಪ್ರತಿ ನೂರರಲ್ಲಿ 10 ಪಾಸಿಟಿವ್‌ ಪ್ರಕರಣ

06:23 AM Jun 30, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕಳೆದ ಸುಮಾರು ನಾಲ್ಕು ತಿಂಗಳಲ್ಲಾದ ಒಟ್ಟಾರೆ ಪ್ರಕರಣಗಳಿಗಿಂತ ಹೆಚ್ಚು ಸೋಂಕು ಪ್ರಕರಣಗಳು ಕಳೆದ ಕೇವಲ ಮೂರು ದಿನಗಳಲ್ಲಿ ದಾಖಲಾಗಿದ್ದು, ಅಕ್ಷರಶಃ ತಲ್ಲಣ ಸೃಷ್ಟಿಸಿದೆ. ಸೋಮವಾರ 738  ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಜೂ.27, 28ರಂದು ಕ್ರಮವಾಗಿ 596 ಹಾಗೂ 783 ಪ್ರಕರಣ ದಾಖಲಾಗಿವೆ. ಅಂದರೆ ಒಟ್ಟಾರೆ ಕಳೆದ 3 ದಿನಗಳಲ್ಲಿ ನಗರದಲ್ಲಿ 2,117 ಜನ ಸೋಂಕಿತರಾಗಿದ್ದಾರೆ.

Advertisement

ಆದರೆ, ಮಾ.1ರಿಂದ ಜೂ. 26ರವರೆಗೆ  1,935 ಪಾಸಿಟಿವ್‌ ಪ್ರಕರಣ ಕಂಡು ಬಂದಿವೆ. ಈ ಮಧ್ಯೆ ಕಳೆದೆರಡು ದಿನಗಳಿಂದ ಗುಣಮುಖರಾಗಿರುವ ಸಂಖ್ಯೆಯೂ ಶೂನ್ಯ. ಇದು ಸೋಂಕಿನ ತೀವ್ರತೆ ಬಿಂಬಿಸುತ್ತದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಒಂದೇ ದಿನದಲ್ಲಿ ಮತ್ತೆ ನಾಲ್ವರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. 3,427 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಇಡೀ ದಿನ 7,910 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ಅಂದರೆ ಪ್ರತಿ ನೂರರಲ್ಲಿ  ಹತ್ತು ಜನರಿಗೆ ಸೋಂಕು ಕಂಡುಬಂದಿದೆ. ನಗರದಲ್ಲಿ ಇಲ್ಲಿಯವರೆಗೆ ಒಟ್ಟು 4,052 ಕೋವಿಡ್‌ 19 ಪ್ರಕರಣ ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು  17,148 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಇನ್ನು ದಿನದ ಅಂತ್ಯಕ್ಕೆ 178 ಐಸಿಯುನಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ವರ್ಷ ಕೆಳಗಿನ 25 ಮಕ್ಕಳಿಗೆ ಸೋಂಕು: ವಯಸ್ಕರು, ವೃದ್ಧರು ಮಾತ್ರವಲ್ಲ, ಮಕ್ಕಳಿಗೂ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸೋಮವಾರ 10 ವರ್ಷದ ಒಳಗಿನ 25 ಮಕ್ಕಳಿಗೆ ವೈರಸ್‌ ತಗುಲಿದೆ. ಈ ಮೂಲಕ ಕಳೆದ 3  ದಿನದಲ್ಲಿ ನೂರಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.

ಚಿಕಿತ್ಸೆ ಸಿಗದೆ ಅಲೆದಾಟ: ಗೊಟ್ಟಿಗೆರೆಯ 45 ವರ್ಷದ ಕೋವಿಡ್‌ 19 ಸೋಂಕಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಸಿಗದೆ ಅಲೆದಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೋಂಕು ದೃಢಪಟ್ಟ ವ್ಯಕ್ತಿಗೆ ಕಳೆದ ಶುಕ್ರವಾರ ತೀವ್ರ ಉಸಿರಾಟ  ತೊಂದರೆ ಕಾಣಿಸಿಕೊಂಡ ಹಿನ್ನಲೆ ಅವರನ್ನು ಮೊದಲು ಜಯನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ಹಾಸಿಗೆ ಅಲಭ್ಯತೆ ಕಾರಣ ನೀಡಿ ವಾಪಸ್‌ ಕಳುಹಿಸಲಾಗಿದೆ. ನಂತರ ರೋಗಿಯನ್ನು ದಾಖಲಿಸಲು  ವಿಕ್ಟೋರಿಯಾ, ಬನ್ನೇರುಘಟ್ಟ ರಸ್ತೆ ಆಸ್ಪತ್ರೆ, ಕೆಂಗೇರಿ ಬಳಿಯ ಆಸ್ಪತ್ರೆಗಳಲ್ಲೂ ದಾಖಲು ಮಾಡಿಕೊಂಡಿಲ್ಲ.

Advertisement

ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲೂ ಹಾಸಿಗೆ ಸಿಗದೆ ರೋಗಿ ಪರದಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಕೊನೆಗೆ ಪ್ರಕ್ರಿಯಾ  ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ತುಮಕೂರು ರಸ್ತೆ ಮೇಲ್ಸೇತುವೆ ಮೇಲೆ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಬಿದ್ದಿದ್ದು, ಪೀಣ್ಯ ಪೊಲೀಸರು ಆ್ಯಂಬುಲನ್ಸ್‌ಗೆ ಫೋನ್‌ ಮಾಡಿ ಗಂಟೆಗಳೇ ಕಳೆದರೂ ಬರಲಿಲ್ಲ.  ವ್ಯಕ್ತಿ ಜ್ವರದಿಂದ ಬಳಲುತ್ತಿದ್ದರಿಂದ ಯಾರೂ ಹತ್ತಿರ ಸುಳಿಯಲಿಲ್ಲ. ಹೊಯ್ಸಳ ವಾಹನ ಅಡ್ಡಲಾಗಿ ನಿಲ್ಲಿಸಿ ಕಾವಲು ನೀಡಲಾಗಿದೆ. 4 ತಾಸಿನ ನಂತರ ಆ್ಯಂಬುಲನ್ಸ್‌ ಬಂದಿದ್ದು, ವ್ಯಕ್ತಿಯನ್ನು ಕರೆದುಕೊಂಡು ಹೋಗಿದ್ದಾರೆ  ಎನ್ನಲಾಗಿದೆ.

5.99ಲಕ್ಷ ರೂ. ಸಂಗ್ರಹ: ಕೋವಿಡ್‌-19 ಸೋಂಕು ನಿಯಂತ್ರಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ , ಮುಖಗವಸು (ಮಾÓR…) ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರಿಗೆ ಮಾರ್ಷಲ್‌ಗ‌ಳು ದಂಡ  ಸಂಗ್ರಹಿಸುತ್ತಿದ್ದು, ಸೋಮವಾರ ಮಾಸ್ಕ್‌ ಧರಿಸದ 2,733 ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 264 ಮಂದಿ ಸೇರಿ 2,997 ಮಂದಿಯಿಂದ ಒಟ್ಟು 5.99 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಬೆಂಗಳೂರು ಪೂರ್ವ 438,  ಪಶ್ಚಿಮ 508, ದಕ್ಷಿಣ 885, ಮಹದೇವಪುರ 283, ರಾಜರಾಜೇಶ್ವರಿ ನಗರ 317, ಯಲಹಂಕ 113, ದಾಸರಹಳ್ಳಿ 40, ಬೊಮ್ಮನಹಳ್ಳಿ ವಲಯದಲ್ಲಿ 411 ಮಂದಿಗೆ ದಂಡ ಹಾಕಲಾಗಿದೆ.

ಒಂದೇ ಕುಟುಂಬದ 9 ಮಂದಿಗೆ ಸೋಂಕು: ಕೋವಿಡ್‌ 19 ಸೊಂಕು ಸಮುದಾಯಕ್ಕೂ ಹರಡುತ್ತಿದ್ದು, ಚಾಮರಾಜಪೇಟೆಯ ಜ್ಯುವೆಲ್ಲರಿ ಅಂಗಡಿ ಮಾಲೀಕರ ಒಂದೇ ಕುಟುಂಬದ 9 ಮಂದಿಗೆ ಸೋಮವಾರ ಸೋಂಕು ದೃಢಪಟ್ಟಿದೆ.  60 ವರ್ಷದ ವೃದ್ಧ, 53 ವರ್ಷದ ಪುರುಷ, 49  ವರ್ಷದ ಮಹಿಳೆ, 16 ವರ್ಷದ ಬಾಲಕಿ, 23 ವರ್ಷದ ಯುವಕ, 21 ವರ್ಷದ ಯುವತಿ ಸೇರಿ 9 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇವರ ಸಂಪರ್ಕದಲ್ಲಿರುವವರನ್ನು  ಆರೋಗ್ಯಾ ಧಿಕಾರಿಗಳು ಕ್ವಾರಂಟೈನ್‌ ಮಾಡಲಾಗಿದೆ. ಸೋಮವಾರ ದೃಢಪಟ್ಟ ಸೋಂಕಿತರಲ್ಲಿ ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯ ದವರೇ ಹೆಚ್ಚಿದ್ದಾರೆ. ಈ ವಲಯಗಳಲ್ಲಿಯೇ ಕೋವಿಡ್‌ 19 ಚಿಕಿತ್ಸೆಗೆ ಕೋರ ಮಂಗಲ  ಒಳಾಂಗಣ ಕ್ರೀಡಾಂಗ ಣ ದ ಲ್ಲಿ ಸಿದ್ಧತೆ ಕೈಗೊಂಡಿರುವುದು. ಕಂಟೈನ್ಮೆಂಟ್‌ ವಲಯಗಳು ಅಧಿಕವಿದೆ.

Advertisement

Udayavani is now on Telegram. Click here to join our channel and stay updated with the latest news.

Next