Advertisement

ದೇಹದಿಂದ ಹೊಮ್ಮುವ ದುರ್ನಾತ ತಡೆಯುವುದು ಹೇಗೆ ? ಇಲ್ಲಿವೆ ಕೆಲವು ಟಿಪ್ಸ್   

07:03 PM Apr 15, 2021 | Team Udayavani |

ಬೇಸಿಗೆಯಲ್ಲಿ ನಿತ್ಯ ಸ್ನಾನ ಮಾಡಿದರೂ ಸಹ ದೇಹದಿಂದ ಬೆವರಿನ ವಾಸನೆ ಹೊಮ್ಮುತ್ತದೆ. ನಿಮ್ಮ ದೇಹದ ವಾಸನೆಯು ನಿಮ್ಮ ಆಹಾರ ಮತ್ತು ಸ್ವಚ್ಛತೆಯ ಅಭ್ಯಾಸಗಳಿಗೆ ನೇರವಾಗಿ ಸಂಬಂಧಿಸಿದೆ. ನೀವು ಸರಿಯಾಗಿ ಸ್ನಾನ ಮಾಡುತ್ತೀರಾ? ಮಾಡೋದಿಲ್ಲ ಅಂದರೆ ಅದನ್ನು ಸರಿಪಡಿಸಿಕೊಳ್ಳಿ. ನೀವು ಕಾಫಿ ಅಥವಾ ಟೀ ಅರ್ಥಾತ್‌ ಕೆಫೀನ್‌ ಸೇವಿಸೋದು ಹೆಚ್ಚಿದೆಯಾ? ತಕ್ಷ ಣ ಅದನ್ನು ನಿಲ್ಲಿಸಿ. ವ್ಯಾಯಾಮ ಮಾಡಿದಾಗ ಬೆವರುವುದು ಸಹಜ. ಒತ್ತಡ ಮತ್ತು ವಾತಾವರಣದಲ್ಲಿ ತುಂಬಾ ಸೆಖೆ ಅಥವಾ ಬಿಸಿಲು ಹೆಚ್ಚಿದ್ದರೆ ಇದು ಉಂಟಾಗಬಹುದು.

Advertisement

ದೇಹದ ವಾಸನೆ ತಡೆಗಟ್ಟುವುದು ಹೇಗೆ ? ಇಲ್ಲಿವೆ ನೋಡಿ ಕೆಲವು ಟಿಪ್ಸ್

  • ತೆಳುವಾದ ಬಟ್ಟೆ ಧರಿಸಿ : ಬೇಸಿಗೆಯಲ್ಲಿ ತೆಳುವಾದ ಬಟ್ಟೆ ಧರಿಸುವುದು ಉತ್ತಮ. ಬಿಗಿಯಾದ ಬಟ್ಟೆಯಿಂದ ಬೆವರಿನ ಉತ್ಪತ್ತಿ ಜಾಸ್ತಿಯಾಗುತ್ತದೆ. ಇದರಿಂದ ದೇಹದಿಂದ ವಾಸನೆ ಬರುತ್ತದೆ. ಈ ಕಾರಣದಿಂದ ತೆಳುವಾದ ಅಂದರೆ ಸುಲಭವಾಗಿ ಗಾಳಿ ಪ್ರವೇಶಿಸುವಂತಹ ಬಟ್ಟೆಗಳನ್ನು ಧರಿಸಿ.

 

  • ಜೇನು ತುಪ್ಪದ ಸ್ನಾನ : ಜೇನು ತುಪ್ಪ ದೇಹದ ವಾಸನೆ ಕಡಿಮೆ ಮಾಡುತ್ತದೆ. ನಿತ್ಯ ಸ್ನಾನದ ಕೊನೆಯಲ್ಲಿ ಸ್ವಲ್ಪ ಬಿಸಿ ನೀರಿನಲ್ಲಿ ಒಂದು ಸ್ಫೂನ್ ಜೇನು ತುಪ್ಪ ಬೆರೆಸಿ, ಮೈಮೇಲೆ ಸುರಿದುಕೊಳ್ಳಿ.

 

  • ಪಟಿಕ : ಪಟಿಕಕ್ಕೆ ಬೆವರಿನ ವಾಸನೆ ಕಡಿಮೆ ಮಾಡುವ ಶಕ್ತಿ ಇದೆ. ದಿನಕ್ಕೆ ಎರಡು ಬಾರಿ ಪಟಿಕದ ಪೌಡರ್ ದೇಹಕ್ಕ ಹಚ್ಚಿಕೊಳ್ಳುವುದರಿಂದ ದುರ್ನಾತ ತಡೆಯಬಹುದು.

 

  • ಲಿಂಬೆ ರಸ: ಲಿಂಬೆ ರಸ ದೇಹದಿಂದ ಹೊರಹೊಮ್ಮವ ಬೆವರನ್ನು ತಡಿಯುವುದಿಲ್ಲ. ಆದರೆ, ಅದರಿಂದ ಹೊರಹೊಮ್ಮುವ ದುರ್ನಾತವನ್ನು ತಡೆಯುತ್ತದೆ. ಲಿಂಬೆ ಹಣ್ಣನ್ನು ಕಟ್ ಮಾಡಿ ನಿಮ್ಮ ದೇಹಕ್ಕೆ ಮಸಾಜ್ ಮಾಡಿಕೊಳ್ಳಿ.
Advertisement

 

  • ಗೋಧಿ ಹುಲ್ಲಿನ ರಸ : ಗೋಧಿ ಹುಲ್ಲಿನಿಂದ ತಯಾರಿಸಿದ ಜ್ಯೂಸ್ ಸೇವನೆಯಿಂದ ದೇಹದ ದುರ್ವಾಸನೆ ತಡೆಯಬಹುದು.

 

  • ಬೇಕಿಂಗ್ ಸೋಡಾ : ಬೇಕಿಂಗ್ ಸೋಡಾ ಬೆವರನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ. ಇದನ್ನು ಬೆವರು ಬರುವ ದೇಹದ ಭಾಗಗಳಿಗೆ ಹಚ್ಚುವುದು ಒಳ್ಳೆಯದು.

 

  • ಬೇವಿನ ತಪ್ಪಲು : ಬೇವಿನ ಎಲೆಯಲ್ಲಿ ಔಷಧಿಯ ಗುಣಗಳಿರುವುದು ಗೊತ್ತೆ ಇರುವಂತಹದು. ಸ್ವಲ್ಪ ಬಿಸಿ ನೀರಿನಲ್ಲಿ ಒಂದೆರಡು ಎಲೆಗಳನ್ನು ಹಾಕಿ ಕುದಿಸಿ. ನಂತರ ಸ್ವಲ್ಪ ಹೊತ್ತು ಆ ನೀರನ್ನು ಆರಿಸಿ, ಅದರಲ್ಲಿ ನಿಮ್ಮ ಕೈವಸ್ತ್ರವನ್ನು ಅದ್ದಿ, ನಿಮ್ಮ ಬಳಿ ಇಟ್ಟುಕೊಳ್ಳಿ. ಇದು ನೈಸರ್ಗಿಕವಾಗಿ ಬೆವರಿನ ವಾಸನೆಯನ್ನು ತೊಡೆದು ಹಾಕುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next