ವಿಜಯಪುರ: ಜಿಲ್ಲೆಯ ಮೊದಲ ಸೋಂಕಿತೆಯ ಸಂಪರ್ಕದಲ್ಲಿದ್ದ ಮತ್ತೆ ಮೂವರಲ್ಲಿ ಕೋವಿಡ್-19 ಸೋಂಕು ದೃಡಪಟ್ಟಿದೆ. ಇದರೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10 ಕ್ಕೇರಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನಿರಂತರ ಏರುತ್ತಿರುವ ಕಾರಣ ಜಿಲ್ಲೆಯ ಜನರನ್ನು ಕೋವಿಡ್-19 ಭೀತಿಯಲ್ಲಿ ಬದುಕುವಂತೆ ಮಾಡಿದೆ. ಎಪ್ರಿಲ್ 12 ರಂದು ಜಿಲ್ಲೆಯಲ್ಲಿ ಮೊದಲ ಬಾರಿಗೆ ಒಂದೇ ದಿನ 6 ಜನರಿಗೆ ಕೋವಿಡ್-19 ಕೋವಿಡ್-19 ಸೋಂಕು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಏಪ್ರಿಲ್ 13 ರಂದು ಮೃತಪಟ್ಟ ಶಂಕಿತ ರೋಗಿಯಲ್ಲೂ ಸೋಂಕು ದೃಡಪಟ್ಟಿತ್ತು.
ಇದೀಗ ಬುಧವಾರ ಮತ್ತೆ ಮೂವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಜಿಲ್ಲೆಯ ಕೋವಿಡ್-19 ಪಾಸಿಟಿವ್ ಮೊದಲ ಸೋಂಕಿತೆ 60 ವರ್ಷದ ವೃದ್ಧೆ P-221 ಜೊತೆ ಸಂಪರ್ಕದಿಂದ ಇದೀಗ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಬುಧವಾರ ಸೋಂಕು ದೃಢಪಟ್ಟವರನ್ನು 33 ವರ್ಷದ ಮಹಿಳೆ P-275 ಹಾಗೂ 26 ವರ್ಷದ ಪುರುಷ P- 276 ಪುರುಷ ಹಾಗೂ P-278 ಮಹಿಳೆ ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಕೇವಲ ನಾಲ್ಕು ದಿನಗಳ ಅಂತರದಲ್ಲಿ 10 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಜನರನ್ನು ಭಯದಲ್ಲಿ ಬದುಕುವಂತೆ ಮಾಡಿದೆ.