Advertisement

Lemon 10-12 ರೂ.! ಗ್ರಾಹಕರ ಜೇಬಿಗೆ ಬಿದ್ದ ಕತ್ತರಿ;  ಬಿಸಿಲ ಝಳದಂತೆ ದರವೂ ಏರಿಕೆ

12:08 AM Mar 26, 2024 | Team Udayavani |

ಬೆಂಗಳೂರು: ತಾಪಮಾನ ಏರಿಕೆಯ ಜತೆಗೆ ಸುಡು ಬಿಸಿಲಿನಲ್ಲಿ ದೇಹಕ್ಕೆ ತಂಪು ನೀಡಬೇಕಿದ್ದ ನಿಂಬೆ ಹಣ್ಣು ಕೂಡ ಈಗ ಬಲು ದುಬಾರಿ ಆಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

Advertisement

ಬಿಸಿಲಿನ ಝಳಕ್ಕೆ ಹೈರಾಣಾದ ಜನತೆ ನಿಂಬೆ ಶರಬತ್ತಿನ ಮೊರೆ ಹೋಗಿದ್ದು, ಎಲ್ಲೆಡೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮವಾಗಿ ನಿಂಬೆ ಹಣ್ಣು ಪ್ರಸ್ತುತ 10 ರೂ.ಗೆ ಒಂದರಂತೆ ಮಾರಾಟವಾಗುತ್ತಿದೆ. ಸಾಮಾನ್ಯ ಗಾತ್ರದ ಹಣ್ಣಿಗೆ 10 ರೂ., ಸಣ್ಣ ಹಣ್ಣಿಗೆ 5 ರಿಂದ 7 ಹಾಗೂ ದೊಡ್ಡ ಗಾತ್ರದ ಹಣ್ಣು 12ರಿಂದ 15 ರೂ.ಗೆ ಮಾರಾಟವಾಗುತ್ತಿದೆ. ನಿಂಬೆ ಶರಬತ್ತಿನ ಬೆಲೆಯೂ ಹೆಚ್ಚಳವಾಗಿದೆ.

ಕಾರಣವೇನು?
ಮಾರುಕಟ್ಟೆಯಲ್ಲಿ ನಿಂಬೆ ಆವಕ ಕಡಿಮೆ ಆಗಿದ್ದರಿಂದ ಸಾಮಾನ್ಯಕ್ಕಿಂತ ದರ ಹೆಚ್ಚಾಗಿದೆ. ಈ ಬಾರಿ ಬರ ಗಾಲದ ಹೊಡೆತ ಬಿದ್ದಿದ್ದರಿಂದ ನಿಂಬೆ ಹಣ್ಣಿನ ಉತ್ಪಾದನೆ ಅಷ್ಟೊಂದು ಆಗಿಲ್ಲ. ನೀರಿಲ್ಲದೆ ಇಳುವರಿ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಮಾರು ಕಟ್ಟೆಯಲ್ಲಿ ಬೇಡಿಕೆ ಇರುವಷ್ಟು ನಿಂಬೆ ಹಣ್ಣು ಪೂರೈಕೆ ಆಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next