Advertisement

ಹರ್ ಘರ್ ಜಲ್ : ಒಂದು ಲಕ್ಷ ಗ್ರಾಮಗಳಲ್ಲಿ ಟ್ಯಾಪ್ ವಾಟರ್ ಸರಬರಾಜು ಕಾರ್ಯ ಪೂರ್ಣ: ಕೇಂದ್ರ   

08:46 PM Jul 14, 2021 | Team Udayavani |

ನವ ದೆಹಲಿ : ಒಂದು ಲಕ್ಷ ಗ್ರಾಮಗಳು ಮತ್ತು 50,000 ಗ್ರಾಮ ಪಂಚಾಯಿತಿಗಳು ಜಲ ಜೀವನ್ ಮಿಷನ್ ಅಡಿಯಲ್ಲಿ ನಲ್ಲಿ ನೀರು ಅಥವಾ ಕೊಳವೆ ನೀರಿನ ಸಂಪರ್ಕವನ್ನು ಹೊಂದಿವೆ ಎಂದು ಜಲ ಶಕ್ತಿ ಸಚಿವಾಲಯ ಇಂದು(ಬುಧವಾರ, ಜುಲೈ 14) ತಿಳಿಸಿದೆ.

Advertisement

ಕೋವಿಡ್ -19 ಸೋಂಕು ಹಾಗೂ ಲಾಕ್‌ ಡೌನ್ ಹೊರತಾಗಿಯೂ, ಜಲ ಜೀವನ್ ಮಿಷನ್ ಯೋಜನೆಯ ಅಡಿಯಲ್ಲಿ ಕೇವಲ  23 ತಿಂಗಳ ಅವಧಿಯಲ್ಲಿ  4.49 ಕೋಟಿ ಟ್ಯಾಪ್ ವಾಟರ್ ಸಂಪರ್ಕವನ್ನು ಒದಗಿಸಲಾಗಿದೆ ಮತ್ತು ಈ ಪಂಚಾಯತ್‌ಗಳಲ್ಲಿನ ಪ್ರತಿ ಮನೆಗೂ ಟ್ಯಾಪ್ ನೀರು ಸರಬರಾಜು ಮಾಡುವ ಮೂಲಕ 50,000 ಗ್ರಾಂ ಪಂಚಾಯಿತಿಗಳನ್ನು ‘ಹರ್ ಘರ್ ಜಲ್’ ಎಂಬಂತೆ  ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : ಕೋವಿಡ್: ರಾಜ್ಯದಲ್ಲಿಂದು 2537 ಸೋಂಕಿತರು ಗುಣಮುಖ; 1990 ಹೊಸ ಪ್ರಕರಣ ಪತ್ತೆ 

ಜಲ ಜೀವನ್ ಮಿಷನ್ ಇಂದು ಭಾರತದಾದ್ಯಂತ 1 ಲಕ್ಷ ಹಳ್ಳಿಗಳಲ್ಲಿನ ಪ್ರತಿ ಮನೆಗಳಿಗೆ 23 ತಿಂಗಳ ಅಲ್ಪಾವಧಿಯಲ್ಲಿ ಟ್ಯಾಪ್ ವಾಟರ್ ಸರಬರಾಜು ಮಾಡುವ ಕೆಲಸವನ್ನು ಮಾಡಿದೆ ಎಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15, 2019 ರಂದು ಪ್ರಾರಂಭಿಸಿದ ಜೆಜೆಎಂ(ಜಲ್ ಜೀವನ್ ಮಿಷನ್) ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಟ್ಯಾಪ್ ವಾಟರ್ ಸಂಪರ್ಕವನ್ನು ಒದಗಿಸುವ ಗುರಿ ಹೊಂದಿದೆ. ಈ ಮೆಗಾ ಯೋಜನೆಗಾಗಿ ಕೇಂದ್ರ ಸರ್ಕಾರ 50,000 ಕೋಟಿಗಳನ್ನು ಮೀಸಲಿಟ್ಟಿದೆ.

Advertisement

ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಪ್ರಾರಂಭದಲ್ಲಿ, ದೇಶದ 18.94 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ, ಕೇವಲ 3.23 ಕೋಟಿ (ಶೇಕಡಾ 17) ಮಾತ್ರ ಟ್ಯಾಪ್ ವಾಟರ್  ಸಂಪರ್ಕವನ್ನು ಹೊಂದಿದೆ.

ಟ್ಯಾಪ್ ವಾಟರ್ ಸರಬರಾಜು 7.72 ಕೋಟಿ (ಶೇ 40.77) ಕುಟುಂಬಗಳನ್ನು ತಲುಪಿದೆ. ಗೋವಾ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಪುದುಚೇರಿ ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 100 ರಷ್ಟು ಟ್ಯಾಪ್ ವಾಟರ್ ಸರಬರಾಜನ್ನು ಮಾಡಲಾಗಿದೆ.

“ಪ್ರಸ್ತುತ, 71 ಜಿಲ್ಲೆಗಳು, 824 ಬ್ಲಾಕ್ ಗಳು, 50,309 ಗ್ರಾಮ ಪಂಚಾಯಿತಿಗಳು ಮತ್ತು 1,00,275 ಗ್ರಾಮಗಳು” ಹರ್ ಘರ್ ಜಲ “ಗುರಿಯನ್ನು ಸಾಧಿಸಿವೆ” ಎಂದು ಸಚಿವಾಲಯ ತಿಳಿಸಿದೆ.

ಕಳೆದ 23 ತಿಂಗಳುಗಳಲ್ಲಿ, 117 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಟ್ಯಾಪ್ ವಾಟರ್ ಸರಬರಾಜು ಶೇಕಡಾ 7 ರಿಂದ 33 ಕ್ಕೆ ಏರಿಕೆಯಾಗಿ, ನಾಲ್ಕು ಪಟ್ಟು ಹೆಚ್ಚಾಗಿದೆ.

ಇನ್ನು, ಇದೇ ಮಾದರಿಯಲ್ಲಿ ಜಪಾನಿನಲ್ಲಿಯೂ ಎನ್ಸೆಫಾಲಿಟಿಸ್- ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಜೆಇ-ಐಇಎಸ್) ಪೀಡಿತ 61 ಜಿಲ್ಲೆಗಳಲ್ಲಿ 97 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಅಲ್ಲಿನ ಸರ್ಕಾರ ಟ್ಯಾಪ್ ವಾಟರ್ ಸರಬರಾಜು ಮಾಡಲಾಗಿದೆ ಎನ್ನುವುದು ವಿಶೇಷ.

ಇದನ್ನೂ ಓದಿ : ಕಡಿಮೆ ಸಮಯದಲ್ಲಿ ಮಲ್ಲಿಗೆ ಹೂವುವನ್ನುಕಟ್ಟುವ ಸರಳ ವಿಧಾನ

Advertisement

Udayavani is now on Telegram. Click here to join our channel and stay updated with the latest news.

Next