ಉಡುಪಿ: ಮೊಬೈಲ್‌ಗೆ ಆಗಂತುಕನೊಬ್ಬ ಕಳುಹಿಸಿದ್ದ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 1 ಲ.ರೂ.ಕಡಿತಗೊಂಡ ಘಟನೆ ನಡೆದಿದೆ.
Advertisement
ಎಚ್‌ಡಿಎಫ್ಸಿ ಬ್ಯಾಂಕ್‌ನ ಕುಂದಾಪುರ ಶಾಖೆಯಲ್ಲಿ ಖಾತೆ ಹೊಂದಿರುವ ಸುಧಾಕರ ಕಾಂಚನ್ ಅವರಿಗೆ ಮಾ.4ರಂದು ಅಪರಿಚಿತನೊಬ್ಬ ಪಾನ್‌ಕಾರ್ಡ್ ಅಪ್‌ಡೇಟ್ ಮಾಡಲು ಲಿಂಕ್ ಕಳುಹಿಸಿದ್ದ. ಅದನ್ನು ಬ್ಯಾಂಕ್‌ನಿಂದ ಕಳುಹಿಸಲಾಗಿದೆ ಎಂದು ನಂಬಿಸಿದ್ದಾನೆ. ಅದನ್ನು ಕ್ಲಿಕ್ ಮಾಡಿದ ಪರಿಣಾಮ ಖಾತೆಯಿಂದ ಹಣ ಕಡಿತವಾಗಿದ್ದು, ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.