Advertisement

ಭದ್ರತೆಗಾಗಿ ಇನ್ನೂ 1 ಲಕ್ಷ ಸಿಸಿಟಿವಿ: ಹರಿಯಾಣ ಸಿಎಂ ಖಟ್ಟರ್‌

07:26 PM Nov 08, 2017 | udayavani editorial |

ಚಂಡೀಗಢ : ರಾಜ್ಯದಲ್ಲಿ ಹೆಚ್ಚುವರಿಯಾಗಿ ಇನ್ನೂ ಒಂದು ಲಕ್ಷ ಸಿಸಿ ಟಿವಿ ಗಳನ್ನು ಅಳವಡಿಸಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಹೇಳಿದ್ದಾರೆ.

Advertisement

ರಾಜ್ಯದ ವಿವಿಧೆಡೆ ಎಗ್ಗಿಲ್ಲದೆ ನಡೆಯುತ್ತಿರುವ ಕ್ರಿಮಿನಲ್‌ ಚಟುವಟಿಕೆಗಳನ್ನು ಮಟ್ಟ ಹಾಕಲಾಗುವುದು ಮತ್ತು ರಾಜ್ಯದಲ್ಲಿ ಎಲ್ಲಿಯೂ ಸಂಘಟಿತ ಅಪರಾಧಗಳು ನಡೆಯವುದಕ್ಕೆ ಅವಕಾಶ ನೀಡಲಾಗದು ಎಂಬ ಭರವಸೆಯನ್ನು ಖಟ್ಟರ್‌ ನೀಡಿದರು. 

ಇಲ್ಲಿಗೆ ಸಮೀಪದ ಪಂಚಕುಲದಲ್ಲಿ ಕೇಂದ್ರೀಕೃತ ಪೊಲೀಸ್‌ ಕಂಟ್ರೋಲ್‌ ರೂಮ್‌ “ಹರಿಯಾಣ 100 ಪ್ರಾಜೆಕ್ಟ್’ ಗೆ ಶಿಲಾನ್ಯಾಸ ನಡೆಸಿದ ಖಟ್ಟರ್‌ ಮಾಧ್ಯಮದೊಂದಿಗೆ ಮಾತನಾಡಿದರು. ರಾಜ್ಯಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಯಾವ ಬೆಲೆ ತೆತ್ತಾದರೂ ಕಾಪಿಡಬೇಕು ಮತ್ತು ಎಲ್ಲಿಯೂ ಸಂಘಟಿತ ಅಪರಾಧಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಹೇಳಿದರು. 

ಕೇಂದ್ರೀಕೃತ ಪೊಲೀಸ್‌ ಕಂಟ್ರೋಲ್‌ ರೂಮ್‌ ಯೋಜನೆಯು 600 ವಾಹನಗಳನ್ನು, ಸಿಸಿಟಿವಿ ವ್ಯವಸ್ಥಾಪನೆಯನ್ನು, ಸಾಫ್ಟ್ ವೇರ್‌ ಮತ್ತು ಹಾರ್ಡ್‌ ವೇರ್‌ ಸೌಕರ್ಯವನ್ನು ಹೊಂದಿರುತ್ತದೆ. ಜತೆಗೆ ಈ ಎಲ್ಲ ಸೌಕರ್ಯಗಳನ್ನು ಅಗ್ನಿ ಶಾಮಕ, ಅಂಬುಲೆನ್ಸ್‌, ನೈಸರ್ಗಿಕ ಪ್ರಕೋಪ ವ್ಯವಸ್ಥಾಪನೆ, ಮಹಿಳಾ ಹೆಲ್ಪ್ ಲೈನ್‌, ನಗದು ಸಾಗಾಟದ ವಾಹನಗಳಿಗೆ ಬ್ಯಾಂಕಿಂಗ್‌ ಭದ್ರತೆ ಪತ್ತೆಹಚ್ಚುವಿಕೆ ಮತ್ತು ಇತರ ಗುಪ್ತಚರ ಮಾಹಿತಿಗಳನ್ನು ಜೋಡಿಸಲಾಗುವುದು ಎಂದು ಖಟ್ಟರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next