Advertisement

ಮಹಿಳಾ ಸಂಘಕ್ಕೆ ಒಂದು ಲಕ್ಷ ಬಡ್ಡಿ ರಹಿತ ಸಾಲ

03:59 PM Sep 16, 2022 | Team Udayavani |

ಸೇಡಂ: ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ, ಸ್ವಾವಲಂಬಿ ಜೀವನ ನಡೆಸಬೇಕು ಎನ್ನುವ ಕಾರಣಕ್ಕಾಗಿ ಮಹಿಳೆಯರ ಸ್ವ-ಸಹಾಯ ಸಂಘಗಳಿಗೆ ತಲಾ ಒಂದು ಲಕ್ಷ ರೂ.ಗಳನ್ನು ಬಡ್ಡಿ ರಹಿತವಾಗಿ ಸಾಲ ನೀಡಲಾಗುತ್ತಿದೆ ಎಂದು ಪಿಕೆಪಿಎಸ್‌ ಅಧ್ಯಕ್ಷೆ ಸಂತೋಷಿರಾಣಿ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.

Advertisement

ಪಟ್ಟಣದ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಡಿಸಿಸಿ ಬ್ಯಾಂಕ್‌ ಸಹಯೋಗದಲ್ಲಿ ಪಿಕೆಪಿಎಸ್‌ ವತಿಯಿಂದ ಮಹಿಳೆಯರ ಸ್ವ-ಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲದ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಅನೇಕ ಮಹಿಳೆಯರು ಸ್ವ-ಸಹಾಯ ಸಂಘಗಳನ್ನು ಮಾಡಿಕೊಂಡು ವಿವಿಧ ರೀತಿಯ ಚಟುವಟಿಕೆ ಮಾಡುತ್ತಿದ್ದಾರೆ. ಪಿಕೆಪಿಎಸ್‌ನಿಂದ ಇದೀಗ 50 ಮಹಿಳಾ ಸ್ವ-ಸಹಾಯ ಸಂಘಗಳಿಗೆ ತಲಾ ಒಂದು ಲಕ್ಷ ರೂ.ಗಳ್ನನು ಬಡ್ಡಿ ರಹಿತವಾಗಿ ಸಾಲ ನೀಡಿದ್ದೇವೆ ಎಂದರು.

ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೂವು, ಹಣ್ಣು, ತರಕಾರಿ ಬೆಳೆಯಲು ಮುಂದಾದರೆ ಸಾಲ ನೀಡಲಾಗುವುದು ಎಂದು ಹೇಳಿದರು. ಪಿಕೆಪಿಎಸ್‌ ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ ನಾಯಿಕೋಡಿ, ಬಿಜೆಪಿ ಮಹಿಳಾ ಮೋರ್ಚಾ ತಾಲೂಕಾಧ್ಯಕ್ಷೆ ಮಂಜುಳಾ ಯಕ್ಮಾಯಿ, ವಿಜಯಲಕ್ಷ್ಮೀ ವಿಶ್ವಕರ್ಮ, ಶೀತಲ್‌ ಪತಂಗೆ, ಶ್ವೇತಾ ಐನಾಪೂರ, ಜಯಶ್ರೀ ಬೋಳದ, ಮಹಾನಂದಾ ಸಾಹು, ವಿಜಯಲಕ್ಷ್ಮೀ ಕೋಬ್ರಿ, ಲಲಿತಾ ಕೋಕಟ್‌, ಮಹಾದೇವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next