Advertisement

ಬಿಡಿಎಗೆ 1 ಲಕ್ಷ ರೂ. ದಂಡ

10:27 AM Nov 06, 2019 | Suhan S |

ಬೆಂಗಳೂರು: ನಿಯಮ ಪಾಲಿಸದೆ ಅನಧಿಕೃತವಾಗಿ ಹಿರಿಯ ನಾಗರಿಕರೊಬ್ಬರ ಖಾಸಗಿ ಜಮೀನು ಸ್ವಾಧೀನಪಡಿಸಿ ಕೊಂಡಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್‌ 1 ಲಕ್ಷ ರೂ. ದಂಡ ವಿಧಿಸಿದೆ.

Advertisement

ಅಲ್ಲದೇ ಅರ್ಜಿದಾರರು ಹಾಗೂ ಬಿಡಿಎ ಕ್ರಮದಿಂದ ಬಾಧಿತರಾಗಿರುವ 67 ವರ್ಷದ ಪಿ.ಜಿ. ಬೆಳ್ಳಿಯಪ್ಪ ಅವರಿಗೆ 31,613 ಚದರ ಅಡಿ ಅಭಿವೃದ್ಧಿ ಹೊಂದಿದ ಜಾಗ ಹಾಗೂ ದಂಡದ 1 ಲಕ್ಷ ರೂ. ಹಣವನ್ನು ನೀಡುವಂತೆ ಆದೇಶಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡಿಎ ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳ ವಾರ ವಜಾಗೊಳಿಸಿದ ಮುಖ್ಯ ನ್ಯಾಯ ಮೂರ್ತಿ ಎ.ಎಸ್‌. ಓಕಾ ಹಾಗೂ ನ್ಯಾ. ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.

ಈ ವೇಳೆ ಬಿಡಿಎ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಇದೊಂದೇ ಪ್ರಕರಣವಲ್ಲ, ಬಿಡಿಎ ಹತ್ತಾರು ಪ್ರಕರಣಗಳಲ್ಲಿ ಹೀಗೆಯೇ ನಡೆದುಕೊಂಡಿದೆ. ನಿಯಮಗಳನ್ನು ಪಾಲಿಸದೆ ಖಾಸಗಿ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದಲ್ಲದೇ ಕಾನೂನು ರೀತಿ ಪರಿಹಾರ ಮತ್ತು ಪರ್ಯಾಯ ಭೂಮಿ ನೀಡಿಲ್ಲ. ಇದು ಒಪ್ಪುವಂತಹದ್ದಲ್ಲ ಎಂದು ಚಾಟಿ ಬೀಸಿತು. ಅಲ್ಲದೇ, ಬೆಳ್ಳಿಯಪ್ಪ ಅವರಿಗೆ ಸೇರಿದ ಜಾಗವನ್ನು 2012ರಿಂದ ಅಕ್ರಮವಾಗಿ ಬಳಸಿಕೊಂಡಿದ್ದಕ್ಕೆ ಬಿಡಿಎಗೆ ಒಂದು ಲಕ್ಷ ರೂ. ದಂಡ ವಿಧಿಸಿದ ನ್ಯಾಯಪೀಠ, ಈ ಹಿಂದೆ ಏಕಸದಸ್ಯ ನ್ಯಾಯಪೀಠ ನೀಡಿದ ಆದೇಶವನ್ನು ಎತ್ತಿಹಿಡಿಯಿತು.

Advertisement

Udayavani is now on Telegram. Click here to join our channel and stay updated with the latest news.

Next