Advertisement

1 ಲಕ್ಷ ಡಾಲರ್‌ ಪರಿಹಾರ ; ಭಾರತೀಯನಿಗೆ ಅಮೆರಿಕದಲ್ಲಿ ನ್ಯಾಯ 

09:16 AM Jul 04, 2018 | Team Udayavani |

ನ್ಯೂಯಾರ್ಕ್‌: ವಿಕಲಚೇತನ ಪುತ್ರನನ್ನು ನೋಡಿಕೊಳ್ಳುವ ಸಲುವಾಗಿ ವರ್ಗಾವಣೆ ಕೇಳಿದ ಭಾರತ ಮೂಲದ ಅಶೋಕ ಪೈ ಎಂಬುವರನ್ನು ಅಮೆರಿಕದಲ್ಲಿನ ಉದ್ಯೋಗದ ಸಮಾನ ಅವಕಾಶಗಳ ಆಯೋಗ (ಇಇಓಸಿ) ನ್ಯಾಯ ದೊರಕಿಸಿಕೊಟ್ಟಿದೆ. 

Advertisement

ಅವರಿಗೆ 1 ಲಕ್ಷ ಅಮೆರಿಕನ್‌ ಡಾಲರ್‌ ಪರಿಹಾರ ನೀಡುವಂತೆ ವಜಾ ಮಾಡಿದ್ದ ಸಂಸ್ಥೆಗೆ ಸೂಚಿಸಲಾಗಿದೆ. ಪೈ ಕೆಲಸ ಮಾಡುತ್ತಿದ್ದ ಕೇಂಬರ್‌ ಕಾರ್ಪೊರೇಷನ್‌ಗೆ ಈ ದಂಡ ವಿಧಿಸಲಾಗಿದೆ. 25 ವರ್ಷ ಗಳ ಹಿಂದೆ ಕಾರು ಅಪಘಾತದಿಂದ  ಪೈ ಅವರ ಪುತ್ರ ವಿಕಲಚೇತನರಾಗಿದ್ದಾರೆ. ಹೀಗಾಗಿ, ಅವರು ವರ್ಗಾವಣೆ ಕೇಳಿದ್ದರು. ಅದನ್ನು ಒಪ್ಪದಿದ್ದ ಸಂಸ್ಥೆ ಅವರ ಅನುಭವಕ್ಕಿಂತ 20 ವರ್ಷ ಕೆಳಗಿನ ವ್ಯಕ್ತಿಯನ್ನು ನೇಮಕ ಮಾಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next