Advertisement

ಈಶಾನ್ಯ ಚೀನದ 30 ಮಹಡಿ ಶಾಪಿಂಗ್‌ ಮಾಲ್‌ನಲ್ಲಿ ಸರಣಿ ಸ್ಫೋಟ; 1 ಸಾವು

12:46 PM Jan 25, 2019 | udayavani editorial |

ಬೀಜಿಂಗ್‌ : ಈಶಾನ್ಯ ಚೀನದಲ್ಲಿನ 30 ಮಹಡಿಗಳ ಶಾಪಿಂಗ್‌ ಮಾಲ್‌ನಲ್ಲಿ ಸ್ಥಳೀಯ ಕಾಲಮಾನ 3.13ರ ಹೊತ್ತಿಗೆ ಸರಣಿ ಸ್ಫೋಟಗಳು ಸಂಭವಿಸಿದ್ದು ಕನಿಷ್ಠ ಒಬ್ಬ ಮೃತಪಟ್ಟು ಇನ್ನೊಬ್ಬ ಗಾಯಗೊಂಡಿರುವುದಾಗಿ ವರದಿಯಾಗಿದೆ. 

Advertisement

ಚೀನದ ಶಾಂಗ್‌ಶುನ್‌ ನಗರದಲ್ಲಿನ ಈ ಬೃಹತ್‌ ಶಾಪಿಂಗ್‌ ಮಾಲ್‌ ನಲ್ಲಿ  ಮೊದಲ ಸ್ಫೋಟ ಮಧ್ಯಾಹ್ನ 3.13ರ ಹೊತ್ತಿಗೆ ನಡೆಯಿತು. ಮೂರು ನಿಮಿಷಗಳ ಬಳಿಕ ಎರಡನೇ ಸ್ಫೋಟ ಕಟ್ಟಡದ 30ನೇ ಮಹಡಿಯಲ್ಲಿ  ಸಂಭವಿಸಿತು. 

ಈ ಸರಣಿ ಸ್ಫೋಟಗಳಿಗೆ ಕಾರಣವೇನು ಎಂಬುದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ ಎಂದು ನಗರದ ಅಧಿಕಾರಿಗಳು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next