Advertisement

ರೂರ್ಕೆಲ ದುರಂತ: 49 ಪಟಾಕಿ ಅಂಗಡಿಗಳು ಭಸ್ಮ, 1 ಸಾವು

12:12 PM Oct 18, 2017 | Team Udayavani |

ರೂರ್ಕೆಲ, ಒಡಿಶಾ : ಇಲ್ಲಿನ ಪವರ್‌ ಹೌಸ್‌‌ ರಸ್ತೆಯಲ್ಲಿ ದೊಡ್ಡ ಮಟ್ಟದಲ್ಲಿ ಸಂಭವಿಸಿರುವ ಭಾರೀ ಅಗ್ನಿ ಅನಾಹುತಕ್ಕೆ ಕನಿಷ್ಠ ಒಬ್ಬ ಬಲಿಯಾಗಿ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

Advertisement

ಧನ್‌ತೇರಾ ಹಬ್ಬದ ಸಂದರ್ಭದಲ್ಲಿ ನಸುಕಿನ 2.30ರ ವೇಳೆಗೆ ವಿದ್ಯುತ್‌ short circuit ಸಂಭವಿಸಿದ ಕಾರಣ ಸುಡುಮದ್ದುಗಳಿಂದ ತುಂಬಿದ್ದ ಹಲವಾರು ಅಂಗಡಿಗಳಿಗೆ ಬೆಂಕಿ ತಗುಲಿ ದೊಡ್ಡ ಅನಾಹುತಕ್ಕೆ ಕಾರಣವಾಯಿತು.

ಸುಮಾರು 49 ಪಟಾಕಿ ಅಂಗಡಿಗಳು ಭಸ್ಮವಾಗಿದ್ದು ಅನೇಕರು ಗಾಯಗೊಂಡಿರುವುದಾಗಿ ವರದಿಯಾಗಿದೆ. 

ಬೆಂಕಿ ಹರಡಿದ ವೇಗಕ್ಕೆ ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಲಾಗಿದ್ದ ಸುಮಾರು 18 ಬೈಕ್‌ಗಳು ಹಾನಿಗೀಡಾದವು.

ಸುಮಾರು 2 ಕೋಟಿ ಪಟಾಕಿಗಳು ಬೆಂಕಿ ತಗುಲಿ ನ್ಪೋಟಗೊಂಡದ್ದೇ ಭಾರೀ ಅಗ್ನಿ ಅನಾಹುತಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ. 

Advertisement

ಪೊಲೀಸರು ಕೇಸು ದಾಖಲಿಸಿಕೊಂಡು ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next