Advertisement

ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ : ಓರ್ವ ಸಾವು, 20 ಮಂದಿಗೆ ಗಾಯ, ಮೂವರು ನಾಪತ್ತೆ

01:34 PM Sep 11, 2022 | Team Udayavani |

ಸೂರತ್ : ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಓರ್ವ ಸಾವನ್ನಪ್ಪಿ. ಇಪ್ಪತ್ತು ಮಂದಿ ಗಾಯಗೊಂಡು ಮೂವರು ನಾಪತ್ತೆಯಾಗಿರುವ ಘಟನೆ ಗುಜರಾತ್ ನ ಸೂರತ್ ನಲ್ಲಿ ಸಂಭವಿಸಿದೆ.

Advertisement

ಗುಜರಾತಿನ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಶನಿವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿ ರಾಸಾಯನಿಕ ಸಂಗ್ರಹಿಸಿಟ್ಟಿದ್ದ ಕಂಟೈನರ್ ಗಳಿಗೆ ಬೆಂಕಿ ತಗುಲಿ ಸ್ಪೋಟಗೊಂಡಿದೆ, ಇದರಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು ಇಪ್ಪತ್ತಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ, ಘಟನೆ ನಡೆದ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹದಿನೈದು ಅಗ್ನಿಶಾಮಕ ವಾಹನ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಕುರುತು ಮಾತನಾಡಿದ ಪೊಲೀಸ್ ಇನ್ಸ್‌ಪೆಕ್ಟರ್ ಡಿವಿ ಬಲ್ದಾನಿಯಾ ಮೃತದೇಹವನ್ನು ತಡರಾತ್ರಿ ಹೊರತೆಗೆಯಲಾಗಿದೆ ಬೆಂಕಿಯಲ್ಲಿ 20 ಕಾರ್ಮಿಕರು ಗಾಯಗೊಂಡಿದ್ದಾರೆ ಮತ್ತು ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ, ಅಲ್ಲದೆ ಅವಘಡದಲ್ಲಿ ಮೂವರು ನಾಪತ್ತೆಯಾಗಿದ್ದು ಅವರ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ವಿಜಯಪುರದಲ್ಲಿ ಭಾರಿ ಮಳೆ: ಭೀಮಾ ನದಿಯ ಸೇತುವೆ ಮುಳುಗಡೆ, ವಸತಿ ಪ್ರದೇಶ ಜಲಾವೃತ

Advertisement

Udayavani is now on Telegram. Click here to join our channel and stay updated with the latest news.

Next