Advertisement

MRPL ಎಂಡೋ ಪೀಡಿತರ ಸೌಲಭ್ಯಕ್ಕಾಗಿ 1 ಕೋ.ರೂ. ನೆರವು

11:42 PM Oct 01, 2023 | Team Udayavani |

ಸುರತ್ಕಲ್‌: ಎಂಆರ್‌ಪಿಎಲ್‌ ಸಂಸ್ಥೆಯು ಎಂಡೋಸಲ್ಫಾನ್‌ ಪೀಡಿತರ ಸೌಲಭ್ಯಕ್ಕಾಗಿ ತನ್ನ ಸಿಎಸ್‌ಆರ್‌ ನಿಧಿಯಿಂದ ನೀಡಿದ 1 ಕೋ.ರೂ. ಕೊಡುಗೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರಿಗೆ ಹಸ್ತಾಂತರಿಸಿದರು.

Advertisement

ಈ ಕೊಡುಗೆಯನ್ನು ಜಿಲ್ಲಾ ಆರೋಗ್ಯ ಇಲಾಖೆಯು ವಿಟ್ಲ, ಸುಳ್ಯ, ಬೆಳ್ತಂಗಡಿ, ಪುತ್ತೂರು ಮತ್ತು ಮೂಡುಬಿದಿರೆ ತಾಲೂಕುಗಳಲ್ಲಿರುವ ಪುನರ್ವಸತಿ ಕೇಂದ್ರಗಳಾದ್ಯಂತ ಬಳಸಲು ನಿರ್ಣಾಯಕ ವೈದ್ಯಕೀಯ ಸೌಲಭ್ಯ ಒದಗಿಸಲು ಬಳಸಿಕೊಳ್ಳಲಾಗುತ್ತದೆ. ನಾಲ್ಕು ಸಂಚಾರಿ ವೈದ್ಯಕೀಯ ವಾಹನಗಳು, ಭೌತಚಿಕಿತ್ಸೆಯ ಉಪಕರಣಗಳು ಮತ್ತು ಹಾಸಿಗೆ ಹಿಡಿದ ರೋಗಿಗಳನ್ನು ಪುನರ್ವಸತಿ ಕೇಂದ್ರಗಳಿಗೆ ಮತ್ತು ಹೊರಗೆ ಸಾಗಿಸಲು ಬೇಕಾದ ವಾಹನಗಳನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ, ಕೊಯಿಲ ಮತ್ತು ಕೊಕ್ಕಡದಲ್ಲಿರುವ ಪುನರ್ವಸತಿ ಕೇಂದ್ರಗಳಿಗೆ 2 ಹೆಚ್ಚಿನ ಸಾಮರ್ಥ್ಯದ ಡೀಸೆಲ್‌ ಜನರೇಟರ್‌ಗಳನ್ನು ಒದಗಿಸಲಾಗುತ್ತದೆ.

ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಜಿಲ್ಲಾಡಳಿತದ ಪ್ರಯತ್ನಗಳನ್ನು ಬೆಂಬಲಿಸಲು ಎಂಆರ್‌ಪಿಎಲ್‌ ಬದ್ಧವಾಗಿದೆ. ಉತ್ತಮ ವೈದ್ಯಕೀಯ ಸೌಲಭ್ಯ ಸಿಗಲು ಬೇಕಾದ ನೆರವು ನೀಡಿದ್ದೇವೆ ಎಂದು ಎಂಆರ್‌ಪಿಎಲ್‌ನ ಜಿಜಿಎಂ ಎಚ್‌ಆರ್‌ ಕೃಷ್ಣ ಹೆಗಡೆ ಹೇಳಿದರು .ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಅವರು ಸಂಸ್ಥೆಯ ನೆರವಿಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಎಂಆರ್‌ಪಿಎಲ್‌ನ ಸಂಸ್ಕರಣಾ ಗಾರದ ಕಾರ್ಯನಿರ್ವಾಹಕ ನಿರ್ದೇ ಶಕ ಶ್ಯಾಮಪ್ರಸಾದ್‌ ಕಾಮತ್‌ ಮುಂಡ್ಕೂರ್‌, ಎಂಆರ್‌ಪಿಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಮನೋಜ್‌ ಕುಮಾರ್‌ ಎ ಮತ್ತು ಎಂಡೋಸಲ್ಫಾನ್‌ ಪೀಡಿತ ಜನರ ನೋಡಲ್‌ ಅಧಿಕಾರಿ ಡಾ| ನವೀನಚಂದ್ರ ಕುಲಾಲ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next