Advertisement

ರಾಜಧಾನಿಯಲ್ಲಿ 1.9 ಲಕ್ಷ ಮೂರ್ತಿ ವಿಸರ್ಜನೆ

03:46 PM Sep 14, 2021 | Team Udayavani |

ಬೆಂಗಳೂರು: ಗಣೇಶ ಹಬ್ಬದ ಮೂರನೇ ದಿನವಾದ ಭಾನುವಾರ 72 ಸಾವಿರ ಗಣೇಶ ಮೂರ್ತಿ ಸೇರಿದಂತೆ ಈ ಬಾರಿ ಹಬ್ಬದಲ್ಲಿ ರಾಜಧಾನಿಯಾದ್ಯಂತ ಒಟ್ಟಾರೆ 1.9 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

Advertisement

ಹಬ್ಬದ ಹಿನ್ನೆಲೆ 372 ಸಂಚಾರಿ, ಮೊಬೈಲ್‌ ಟ್ಯಾಂಕರ್‌ ಹಾಗೂ 10 ಕಲ್ಯಾಣಿ, ಹೊಂಡಗಳಲ್ಲಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನವಾದ ಶುಕ್ರವಾರ 93 ಸಾವಿರ ಮೂರ್ತಿಗಳ ವಿಸರ್ಜನೆ ಮಾಡಲಾಗಿತ್ತು. ಇನ್ನು ಎರಡನೇ ದಿನವಾದ ಶನಿವಾರ22 ಸಾವಿರ ಮೂರ್ತಿಗಳು,
ಭಾನುವಾರ 72 ಸಾವಿರ ಮೂರ್ತಿಗಳು ವಿಸರ್ಜನೆಯಾಗಿವೆ. ಒಟ್ಟಾರೆ 1, 87,678 ಮೂರ್ತಿಗಳು ವಿಸರ್ಜನೆಯಾಗಿವೆ ಎಂದು ಬಿಬಿಎಂಪಿ ತಿಳಿಸಿದೆ.

ಹಬ್ಬದ ಮೂರನೇ ದಿನವಾದ ಭಾನುವಾರ ಪೂರ್ವ ವಲಯದ 76 ಮೊಬೈಲ್‌ ಟ್ಯಾಂಕರ್‌ ನಲ್ಲಿ 2,483, ಹಲಸೂರು ಕೆರೆಯ ಬಳಿಯ ಟ್ಯಾಂಕ್‌ ನಲ್ಲಿ 22,242 ಸೇರಿದಂತೆ ಒಟ್ಟು 24,725 ಗಣೇಶ ಮೂರ್ತಿ ವಿಸರ್ಜನೆಮಾಡಲಾಗಿದೆ. ಸ್ಯಾಂಕಿಕೆರೆಯಬಳಿಟ್ಯಾಂಕ್‌ನಲ್ಲಿ 13,131 ಸೇರಿ ಪಶ್ಚಿಮ ವಲಯದಲ್ಲಿ 20,283 ಮೂರ್ತಿ ವಿಸರ್ಜನೆ ಮಾಡಲಾಗಿದೆ. ಯಡಿಯೂರು ಕೆರೆ ಟ್ಯಾಂಕ್‌ನಲ್ಲಿ 12,800, ಹಾಗೂ ವಿವೇಕಾನಂದಪಾರ್ಕ್‌ 2,830 ಮೂರ್ತಿ ಸೇರಿ ದಕ್ಷಿಣ ವಲಯದಲ್ಲಿ 16,895 ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಇದನ್ನೂ ಓದಿ:ಮೂರು ಘಟನೆ ಸೇರಿ ಒಂದು ಸಿನಿಮಾ: ಸೆಟ್ಟೇರಿತು ‘ತ್ರಿವೇದಂ’

ಮಹಾದೇವಪುರ 28 ಮೊಬೈಲ್‌ ಟ್ಯಾಂಕರ್‌, ಮೂರು ಕೆರೆ ಹಾಗೂ ಕಲ್ಯಾಣಿ ಸೇರಿದಂತೆ ಒಟ್ಟು 2,419 ಮೂರ್ತಿ ವಿಸರ್ಜನೆ ಮಾಡಲಾಗಿದೆ. ಬೊಮ್ಮನಹಳ್ಳಿ 36 ಮೊಬೈಲ್‌ ಟ್ಯಾಂಕರ್‌ನಲ್ಲಿ 1,653 ಮೂರ್ತಿ, ಯಲಹಂಕ 14 ಮೊಬೈಲ್‌ ಟ್ಯಾಂಕರ್‌ನಲ್ಲಿ 4,244 ಹಾಗೂ ಆರ್‌ ಆರ್‌ ನಗರದಲ್ಲಿ 103 ಮೊಬೈಲ್‌ ಟ್ಯಾಂಕರ್‌ 1,705 ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಮನೆ ಗಣೇಶ ಮೂರ್ತಿಗಳೇ ಹೆಚ್ಚು: ಕೊರೊನಾ ಸೋಂಕು ಹಿನ್ನೆಲೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಬಿಬಿಎಂಪಿ ಸಾಕಷ್ಟು ನಿರ್ಬಂಧ ವಿಧಿಸಿತ್ತು. ಹಬ್ಬದ ಹಿಂದಿನ ದಿನ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರೂ ಮೌಖೀಕ ಸಡಿಲಿಕೆ ನೀಡಲಾಗಿತ್ತಾದರೂ, ಪರಿಷ್ಕೃತ ಆದೇಶ ಹೊರಡಿಸಿರಲಿಲ್ಲ. ಹೀಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಸಂಖ್ಯೆ ಶೇ.90 ರಷ್ಟು ಕಡಿಮೆಯಾಗಿತ್ತು. “ವಿಸರ್ಜನೆ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನೆಯಲ್ಲಿ ಕೂರಿಸಿದ್ದ ಗಣೇಶಗಳ ಸಂಖ್ಯೆಯೆ ಹೆಚ್ಚಿತ್ತು’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next