Govt info;ದೇಶದಲ್ಲಿ ರಸ್ತೆ ಅಪಘಾ*ತದಲ್ಲಿ ಈ ವರ್ಷ 1.78 ಲಕ್ಷ ಸಾ*ವು
18-38ರ ವಯೋಮಿತಿಯವರೇ ಹೆಚ್ಚು.. ನಿಯಮ ಉಲ್ಲಂಘನೆ ಕಾರಣ
Team Udayavani, Dec 13, 2024, 6:55 AM IST
ಹೊಸದಿಲ್ಲಿ: ರಸ್ತೆ ಅಪಘಾತಗಳಿಂದ ದೇಶದಲ್ಲಿ ಈ ವರ್ಷ 1.78 ಲಕ್ಷ ಮಂದಿ ಅಸುನೀಗಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ಅಸುನೀಗಿದ 1.78 ಲಕ್ಷ ಮಂದಿಯ ಪೈಕಿ ಶೇ. ಶೇ.60ರಷ್ಟು ಮಂದಿ 18ರಿಂದ 34 ವರ್ಷದೊಳಗಿನವರು. ಈ ಪೈಕಿ ಉತ್ತರಪ್ರದೇಶದಲ್ಲಿ 23,000 ಮಂದಿ ಅಸುನೀಗಿ ಮೊದಲ ಸ್ಥಾನದಲ್ಲಿದೆ. 18,000 ಮಂದಿ ಮೃತಪಟ್ಟು ತಮಿಳುನಾಡು 2ನೇ, ಮಹಾರಾಷ್ಟ್ರದಲ್ಲಿ 15,000 ಮಂದಿ ಮೃತರಾಗಿ 3ನೇ ಸ್ಥಾನದಲ್ಲಿದೆ ಎಂದರು.
ಬೆಂಗಳೂರಿಗೆ 2ನೇ ಸ್ಥಾನ: ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ ನಗರಗಳ ಸಾಲಿನಲ್ಲಿ ಬೆಂಗಳೂರಿಗೆ 2ನೇ ಸ್ಥಾನವಿದ್ದು, 915 ಮಂದಿ ಈ ವರ್ಷ ಸಾವಿಗೀಡಾಗಿದ್ದಾರೆ. ಹೊಸದಿಲ್ಲಿಯಲ್ಲಿ 1,400 ಮಂದಿ ಮೃತಪಟ್ಟು ಅದು ಮೊದಲ ಸ್ಥಾನದಲ್ಲಿದೆ ಎಂದಿದ್ದಾರೆ.
ಮುಜುಗರ: ದೇಶದಲ್ಲಿನ ಅಪಘಾತಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟಾಗುತ್ತದೆ. ಸರಿಯಾದ ರೀತಿಯಲ್ಲಿ ವಾಹನ ಚಾಲನೆ ಮಾಡದಿರುವುದಿಂದಲೇ ಅಪಘಾತ ಉಂಟಾಗುತ್ತದೆ. ಸಂಚಾರ ನಿಯಮಗಳ ಬಗ್ಗೆ ದೇಶದ ಯುವಕರಿಗೆ ಅರಿವು ಮೂಡಿಸಬೇಕಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.