ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಾಘಮೇಳದಲ್ಲಿ ದಾಖಲೆಯ ಸಂಖ್ಯೆಯ ಯಾತ್ರಿಗಳು ಪಾಲ್ಗೊಂಡಿದ್ದಾರೆ.
ಗಂಗಾನದಿ ಮತ್ತು ಸಂಗಮ ಸ್ಥಾನದಲ್ಲಿ ಶುಕ್ರವಾರ ರಾತ್ರಿ 12 ಗಂಟೆಯಿಂದ ಶನಿವಾರ ಮಧ್ಯಾಹ್ನ 12 ಗಂಟೆಯವರೆಗೆ 1.5 ಕೋಟಿ ಭಕ್ತರು ಮುಳುಗೆದ್ದಿದ್ದಾರೆ. ಜ.26ಕ್ಕೊಮ್ಮೆ ಇದೇ ರೀತಿಯಲ್ಲಿ ಭಕ್ತರು ಸಂಗಮ ಸ್ಥಾನಕ್ಕೆ ತೆರಳಲಿದ್ದಾರೆ. ಉತ್ತರಭಾರತದಲ್ಲಿ ಮೌನಿ ಅಮವಾಸ್ಯೆ ಭಾರೀ ಜನಪ್ರಿಯತೆ ಹೊಂದಿರುವುದರಿಂದ, ಪವಿತ್ರಸ್ನಾನ ಮಾಡಲು ಭಕ್ತರು ಆಗಮಿಸಿದ್ದರು.
ಮೌನಿ ಅಮವಾಸ್ಯೆಯ ಹಬ್ಬವು ತಪಸ್ಸು ಮತ್ತು ಯೋಗದ ಹಬ್ಬವಾಗಿದೆ. ಮೌನಿ ಅಮಾವಾಸ್ಯೆಯ ದಿನದಂದು ಪ್ರದಕ್ಷಿಣೆ, ಪೂಜೆ, ಸ್ನಾನ, ದಾನ, ತಪಸ್ಸು ಮತ್ತು ಯೋಗದ ಆಚರಣೆ ಇರುತ್ತದೆ. ಈ ಬಾರಿ ಶನಿವಾರ ಮೌನಿ ಅಮವಾಸ್ಯೆ ಇದ್ದುದರಿಂದ ಶನಿಶ್ಚರಿ ಅಮಾವಾಸ್ಯೆ ಎಂದೂ ಕರೆಯಲಾಗುತ್ತಿದೆ. ಶನಿಶ್ಚರಿ ಅಮಾವಾಸ್ಯೆಯ ಯೋಗವು ಗಂಗಾ ಸ್ನಾನದ ಮಹತ್ವವನ್ನು ಹೆಚ್ಚಿಸಿದೆ.