ತುಂಗಾಭದ್ರಾ ನದಿಗೆ 1.40 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಸಂಪೂರ್ಣ ಜಲಾವೃತಗೊಂಡ ಕಂಪ್ಲಿ ಸೇತುವೆ
ಗಂಗಾವತಿ: ತುಂಗಭದ್ರಾ ಡ್ಯಾಮ್ ಒಳಹರಿವು ಹೆಚ್ಚಳದಿಂದಾಗಿ ತುಂಗಾಭದ್ರಾ ನದಿಗೆ 1.40 ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸುತ್ತಿರುವುದರಿಂದ ತಾಲ್ಲೂಕಿನ ಚಿಕ್ಕಜಂತಕಲ್ ಹತ್ತಿರ ಇರುವ ಕಂಪ್ಲಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಇಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಕಡೆಬಾಗಿಲು ಸೇತುವೆ ಮೂಲಕ ಬಿಡಲಾಗುತ್ತಿದೆ.
ಇದನ್ನೂ ಓದಿ: ನೂತನ ಸಿಎಂ ಬಳಿಕ ಸಂಪುಟ ಪುನಾರಚನೆ ಸಾದ್ಯತೆ ಬಗ್ಗೆ ಸಚಿವ ಶಿವರಾಮ್ ಹೆಬ್ಬಾರ ಹೇಳಿದ್ದೇನು?
ನದಿಗೆ ಬರುತ್ತಿರುವ ನೀರನ್ನು ವೀಕ್ಷಿಸಲು ಜನರು ಆಗಮಿಸುತ್ತಿದ್ದು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ತಾಲ್ಲೂಕಿನ ಆನೆಗೊಂದಿ ನವವೃಂದಾವನ ಗಡ್ಡಿ ಅರುವತ್ತು 64 ಕಾಲಿನ ಮಂಟಪ, ಋಷ್ಯಮೂಕ ಪರ್ವತದಲ್ಲಿ ರುವ ಸುಗ್ರೀವ ದೇವಾಲಯ ಮತ್ತು ವಿರುಪಾಪುರ ಗಡ್ಡಿ ಪುರಾತನ ಸೇತುವೆ ಅಕ್ವಡೆಕ್ಟ್ ಸಂಪೂರ್ಣವಾಗಿ ಜಲಾವೃತಗೊಂಡಿದ್ಧು ಜನ ಸಂಪರ್ಕ ಕಡಿದುಕೊಂಡಿವೆ.
ತಾಲ್ಲೂಕಿನ ಸಣಾಪುರ ವಿರುಪಾಪುರಗಡ್ಡೆ ಹನುಮನಹಳ್ಳಿ ಆನೆಗುಂದಿ ಕಡೆಬಾಗಿಲು ಗೂಗಿ ಬಂಡಿ,ಚಿಕ್ಕಜಂತಕಲ್ ನದಿ ಪಾತ್ರದ ಗ್ರಾಮಗಳಲ್ಲಿ ಪೊಲೀಸ್ ಕಂದಾಯ ಇಲಾಖೆ ಗ್ರಾಪಂ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ.