Advertisement

ಕಿಸಾನ್‌ ಯೋಜನೆಗೆ 1.22 ಲಕ್ಷ ರೈತರ ನೋಂದಣಿ

02:42 PM Jul 09, 2019 | Suhan S |

ಧಾರವಾಡ: ಜಿಲ್ಲೆಯ 1,66,000 ರೈತರ ಪೈಕಿ ಈಗಾಗಲೇ ಅರ್ಹರಾಗಿರುವ 1,22,000 ರೈತರನ್ನು ಪಿಎಂ ಕಿಸಾನ್‌ ಯೋಜನೆಗೆ ನೋಂದಾಯಿಸಲಾಗಿದೆ. ಇನ್ನು ಜು. 10ರವರೆಗೆ ದಿನಾಂಕ ವಿಸ್ತರಿಸಿ ಆದೇಶ ನೀಡಿದ್ದು, ಅದರಂತೆ ಉಳಿದ ರೈತರನ್ನು ನೊಂದಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ದೀಪಾ ಚೋಳನ್‌ ಹೇಳಿದರು.

Advertisement

ಡಿಸಿ ಕಚೇರಿಯಲ್ಲಿ ವನಹಳ್ಳಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮದಲ್ಲಿ ರೈತರ ಮನೆ ಮನೆಗೆ ಹೋಗಿ ಅಗತ್ಯ ದಾಖಲಾತಿ ಸಂಗ್ರಹಿಸುತ್ತಿದ್ದಾರೆ. ಒಟ್ಟು ರೈತರಲ್ಲಿ ಪಿಎಂ ಕಿಸಾನ್‌ ಮಾರ್ಗಸೂಚಿ ಪ್ರಕಾರ ಸರ್ಕಾರಿ ನೌಕರ ಪಿಂಚಣಿ ಪಡೆಯುವ ವಕೀಲ, ವೈದ್ಯ, ಪೌತಿ, ಪರಸ್ಥಳದಲ್ಲಿ ವಾಸಿಸುವವರು ಸೇರಿ ವಿವಿಧ ಕಾರಣಗಳಿಂದ ಹೊರಗುಳಿಯುವ ರೈತರನ್ನು ಹೊರತು ಪಡಿಸಿದರೆ, ಜಿಲ್ಲೆಯ ಅರ್ಹ ರೈತರು ನೂರಕ್ಕೆ ನೂರರಷ್ಟು ಕಿಸಾನ್‌ ಯೋಜನೆಗೆ ನೋಂದಣಿ ಆಗುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ವನಹಳ್ಳಿ ಗ್ರಾಮದ ಪ್ರಗತಿಪರ ರೈತರಾದ ಅಶೋಕ ನಾವಳ್ಳಿ ಹಾಗೂ ಏಗಪ್ಪ ಮಟ್ಟಿ ಮಾತನಾಡಿ, ವನಹಳ್ಳಿ ಗ್ರಾಮದ ಒಟ್ಟು 589 ರೈತರ ಪೈಕಿ 440 ಜನ ಪಿಎಂ ಕಿಸಾನ್‌ ಯೋಜನೆಗೆ ನೋಂದಾಯಿಸಿದ್ದೇವೆ. ಉಳಿದಂತೆ ಸರ್ಕಾರಿ ನೌಕರರು ಮತ್ತು 117 ಜನ ಪರಸ್ಥಳದ ರೈತರಿದ್ದಾರೆ. ಇದರಲ್ಲಿ ಬೇರೆ ಕಡೆ ನೋಂದಾಯಿಸದ ಮತ್ತು ಅರ್ಹ ರೈತರನ್ನು ಪಿಎಂ ಕಿಸಾನ್‌ ಯೋಜನೆಗೆ ಒಳಪಡಿಸಲು ನಾವು ಸಹಕಾರ ನೀಡುತ್ತಿದ್ದೇವೆ. ಸ್ವತಃ ರೈತರನ್ನು ಸಂಪರ್ಕಿಸಿ ಅವರ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡುತ್ತಿದ್ದೇವೆ. ಜು. 10ರೊಳಗೆ ಸಂಪೂರ್ಣ ಗುರಿ ಸಾಧಿಸಿ ನಮ್ಮ ಗ್ರಾಮವನ್ನು ಪಿಎಂ ಕಿಸಾನ್‌ ಯೋಜನೆಗೆ ಸಂಪೂರ್ಣವಾಗಿ ಒಳಪಟ್ಟ ಗ್ರಾಮವನ್ನಾಗಿ ಜಿಲ್ಲಾಧಿಕಾರಿಗಳಿಂದ ಘೋಷಣೆ ಮಾಡಿಸಿ ನಾಮಫಲಕ ಹಾಕಿಸುತ್ತೇವೆ ಎಂದರು.

ಗ್ರಾಮದ ರೈತರಾದ ಬಸಪ್ಪ ಅಂಗಡಿ, ಬಡೇಸಾಬ ನದಾಫ್‌, ಮುಕ್ತುಂಸಾಬ ಹಂಚಿನಾಳ, ಮಹಾದೇವಪ್ಪ ನರಗುಂದ, ಶೇಖಯ್ಯ ಸುತಗಟ್ಟಿ. ಚಂದ್ರಶೇಖರಯ್ಯ ಹಿರೇಮಠ, ನೀಲಪ್ಪ ಹೊಳಿಬಸಣ್ಣವರ ಮತ್ತು ಫಕೀರಪ್ಪ ಕುಬಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next