ಸಯೇಶಾ ಸೈಗಲ್ ಬಾಲಿವುಡ್, ತೆಲುಗು, ಇದೀಗ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ. ಇವರು ಹಿಂದಿಯ ಖ್ಯಾತ ಚಿತ್ರ ತಾರೆ ಸೈರಾ ಭಾನು ಮತ್ತು ದೀಲಿಪ್ ಕುಮಾರ್ ರವರ ಮೊಮ್ಮಗಳು.
1997 ರಲ್ಲಿ ಸುಮೀತ್ ಸೈಗಲ್ ಮತ್ತು ಶಹೀನ್ ದಂಪತಿಗಳ ಪುತ್ರಿಯಾಗಿ ಮುಂಬೈನಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇಂಗ್ಲೆಂಡಿನಲ್ಲಿ ಮುಗಿಸಿ, ಪಿಯುಸಿಯನ್ನು ಮುಂಬೈನಲ್ಲಿ ಮುಗಿಸಿದರು.