Advertisement

ಒಂದೆಡೆ ವಿವಾಹ…ಮತ್ತೊಂದೆಡೆ ಹೋಟೆಲ್ ರೂಂನಲ್ಲಿಟ್ಟಿದ್ದ 2 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು

11:37 AM Nov 27, 2021 | Team Udayavani |

ಜೈಪುರ್:ಐಶಾರಾಮಿ ಹೋಟೆಲ್ ನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ರೂಂನೊಳಗಿದ್ದ ಎರಡು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿರುವ ಘಟನೆ ಜೈಪುರದಲ್ಲಿ ನಡೆದಿರುವುದಾಗಿ ಪೊಲೀಸರು ಶುಕ್ರವಾರ(ನವೆಂಬರ್ 26)  ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಮುದ್ದೇಬಿಹಾಳ: ಯೂನಿಯನ್ ಬ್ಯಾಂಕ್ ಎಟಿಎಂ ದರೋಡೆ ಪ್ರಕರಣ ಭೇದಿಸಿದ ಪೊಲೀಸರು

ಮುಂಬಯಿ ಮೂಲದ ಉದ್ಯಮಿ ರಾಹುಲ್ ಭಾಟಿಯಾ ಅವರ ಮಗಳ ವಿವಾಹವನ್ನು ಆಯೋಜಿಸಿದ್ದ ಜೈಪುರದ ಹೋಟೆಲ್ ಕ್ಲಾರ್ಕ್ಸ್ ಅಮಿರ್ ನಲ್ಲಿ ಈ ಕಳವು ಘಟನೆ ನಡೆದಿದೆ.

ಐಶಾರಾಮಿ ಹೋಟೆಲ್ ನ ಏಳನೇ ಅಂತಸ್ತಿನ ರೂಂನಲ್ಲಿ ಭಾಟಿಯಾ ಮತ್ತು ಕುಟುಂಬ ಸದಸ್ಯರು ವಾಸ್ತವ್ಯ ಹೂಡಿದ್ದರು. ರೂಂನಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ವಜ್ರಾಭರಣ ಹಾಗೂ 95 ಸಾವಿರ ರೂಪಾಯಿ ನಗದು ಇತ್ತು. ಭಾಟಿಯಾ ಮತ್ತು ಕುಟುಂಬ ಸದಸ್ಯರು ಹೋಟೆಲ್ ನ ಸಭಾಂಗಣದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ವಜ್ರಾಭರಣ ಮತ್ತು ನಗದನ್ನು ಕದ್ದೊಯ್ದಿದ್ದಾರೆ ಎಂದು ಜವಾಹರ್ ಸರ್ಕಲ್ ನ ಠಾಣಾಧಿಕಾರಿ ರಾಧಾರಮಣ್ ಗುಪ್ತಾ ಪಿಟಿಐಗೆ ತಿಳಿಸಿದ್ದಾರೆ.

ಹೋಟೆಲ್ ಸಿಬಂದಿಯ ಸಹಕಾರದಿಂದಲೇ ಈ ಕಳ್ಳತನ ನಡೆದಿದೆ ಎಂದು ರಾಹುಲ್ ಭಾಟಿಯಾ ತಮ್ಮ ದೂರಿನಲ್ಲಿ ಆರೋಪಿಸಿದ್ದು, ಹೋಟೆಲ್ ನಲ್ಲಿರುವ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಲಾಗಿದೆ. ಅಲ್ಲದೇ ಹೋಟೆಲ್ ಆಡಳಿತ ಮಂಡಳಿ ಮತ್ತು ಸಿಬಂದಿಗಳ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next