Advertisement

ಪ್ರಧಾನಿ ಭೇಟಿ ಹಿನ್ನೆ ಲೆ: ಸಂಚಾರ ವ್ಯವಸ್ಥೆ ಯಲ್ಲಿ ಮಹತ್ವ ದ ಬದಲಾವಣೆ

09:10 AM Sep 02, 2022 | Team Udayavani |

ಕೆಂಜಾರು-ಕೆಪಿಟಿ, ಹೆದ್ದಾರಿ ಸಂಚಾರ ನಿಷೇಧ :

Advertisement

ಬಜಪೆ-ಕೆಂಜಾರು-ಮರವೂರು-ಮರಕಡ-ಕಾ ವೂರು-ಬೋಂದೆಲ್‌- ಪದವಿನಂಗಡಿ-ಯೆಯ್ನಾಡಿ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಜಂಕ್ಷನ್‌ ನಿಂದ ಕೊಟ್ಟಾರ ಚೌಕಿ-ಕೂಳೂರು-ಎನ್‌ಎಂಪಿಎವರೆಗೆ ಹಾದು ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ರೀತಿಯ ವಾಹನಗಳನ್ನು ನಿಲ್ಲಿಸುವಂತಿಲ್ಲ. ಇದೇ ರಸ್ತೆಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಎಲ್ಲ ಸರಕು ವಾಹನ, ಘನ ವಾಹನ, ಪ್ರವಾಸಿ ವಾಹನ ಹಾಗೂ ಇತರ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಆದರೆ ಗೋಲ್ಡ್‌ ಪಿಂಚ್ ಸಿಟಿ ಮೈದಾನದ ಸಮಾವೇಶಕ್ಕೆ ಹೋಗುವ ಅತೀ ಗಣ್ಯ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರ ವಾಹನಗಳು ನಿಗದಿತ ನಿಲುಗಡೆ ಸ್ಥಳಗಳಿಗೆ ಹೋಗಲು, ಮತ್ತು ತುರ್ತು ಸೇವೆಯ ವಾಹನಗಳಿಗೆ ನಿಷೇಧಿತ ರಸ್ತೆಗಳಲ್ಲಿ ಸಂಚರಿಸಬಹುದು.

ಗೋಲ್ಡ್‌ ಪಿಂಚ್ ಮೈದಾನ ಮತ್ತು ಸುತ್ತಲಿನ 500 ಮೀ. ವ್ಯಾಪ್ತಿಯ ರಸ್ತೆಗಳಲ್ಲೂ ಎಲ್ಲ ವಾಹನಗಳ ನಿಲುಗಡೆ ಗೆ ನಿಷೇಧ. ಸೆ. 2ರಂದು ಬೆಳಗ್ಗೆ 10ರಿಂದ ಪ್ರಧಾನಿಯವರು ವಿಮಾನ ನಿಲ್ದಾಣದಿಂದ ನಿರ್ಗಮಿಸುವವರೆಗೆ ನಂತೂರು, ಬಿಕರ್ನಕಟ್ಟೆ- ಕೈಕಂಬ, ಮಂಗಳ ಜ್ಯೋತಿ, ವಾಮಂ ಜೂರು, ಪೊರ್ಕೊಡಿ, ಮೂಲ್ಕಿ, ಹಳೆಯಂಗಡಿ, ಜೋ ಕಟ್ಟೆ ಕ್ರಾಸ್‌, ಲೇಡಿಹಿಲ್‌ ಸೇರಿದಂತೆ 9 ಜಂಕ್ಷನ್‌ಗಳಲ್ಲಿ ಸಂಚಾರ ಬದಲಾಯಿಸಿ, ಪರ್ಯಾಯ ರಸ್ತೆ ಗುರುತಿಸ ಲಾಗಿದೆ.

  • ಉಡುಪಿ, ಮೂಲ್ಕಿ, ಸುರತ್ಕಲ್‌ ಹಾಗೂ ಬಜಪೆ ಕಡೆಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ಫಲಾನುಭವಿ ಮತ್ತು ಜನರನ್ನು ಕರೆದುಕೊಂಡು ಬರುವ ಬಸ್‌ ಗಳು ಕೂಳೂರು ಜಂಕ್ಷನ್‌ನಲ್ಲಿ ಜನರನ್ನು ಇಳಿಸಿ ನಿಗದಿಪಡಿಸಲಾದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸ ಬೇಕು. ಮಂಗಳೂರು ನಗರ, ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಸುಳ್ಯ, ಮಡಿಕೇರಿ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೇರಳ ಕಡೆಗಳಿಂದ ಬರುವ ವಾಹನಗಳು ಕೊಟ್ಟಾರ ಚೌಕಿ ಜಂಕ್ಷನ್‌ ಬಳಿ ಇಳಿಸಿ ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲ್ಲಿಸಬೇಕು.

15 ಕಡೆ ಪಾರ್ಕಿಂಗ್‌ಗೆ ವ್ಯವಸ್ಥೆ :

  • ಬಂಗ್ರ ಕೂಳೂರಿನ ಡೆಲ್ಟಾ ಗ್ರೌಂಡ್‌ನ‌ಲ್ಲಿ ವಿವಿಐಪಿ ವಾಹನಗಳಿಗೆ (300 ಕಾರು), ಕೂಳೂರಿನ ಸೋಮಯಾಜಿ ಮೈದಾನದಲ್ಲಿ ವಿಐಪಿ ವಾಹನಗಳಿಗೆ (500ಕಾರು) ನಿಲ್ಲಿಸಲು ಪೊಲೀಸ್‌ ಇಲಾಖೆಯ ಪಾಸ್‌ ಅವಶ್ಯ.
  • ಪಣಂಬೂರು-ತಣ್ಣೀರುಬಾವಿ ರಸ್ತೆಯಲ್ಲಿ ಕಾವೂರು, ಸುರತ್ಕಲ್‌, ಪಣಂಬೂರು, ಬಜಪೆ ಮಾರ್ಗವಾಗಿಬರುವ, ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು, ಫ‌ಲಾನುಭವಿ ಗಳ ವಾಹನಗಳಿಗೆ(1,500ಬಸ್‌, 500ಕಾರು) ನಿಲುಗಡೆ.
  • ಎನ್‌ಎಂಪಿಎ ಮೈದಾನದಲ್ಲಿ (200 ಬಸ್‌ಗಳು, 600 ಬೈಕ್‌ಗಳು) ಪಣಂಬೂರು ಎಂಎಸ್‌ಇಝೆಡ್‌ ರಸ್ತೆಯಲ್ಲಿ (1000 ಲಘು ವಾಹನಗಳು)ಕಾವೂರು, ಸುರತ್ಕಲ್‌, ಪಣಂಬೂರು, ಬಜಪೆ ಮಾರ್ಗವಾಗಿ ಹಾಗೂ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳ ನಿಲುಗಡೆ. Z
  • ಬಂಗ್ರ ಕೂಳೂರು ಎಜೆ ಶೆಟ್ಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪೊಲೀಸ್‌ ಇಲಾಖೆಯಿಂದ ಪಾಸ್‌ ಪಡೆದ ವಿಐಪಿ ವಾಹನಗಳ (100 ಕಾರುಗಳು) ನಿಲುಗಡೆ.
  • ಬಂಗ್ರ ಕೂಳೂರು ಸಮಾವೇಶದ ಅಮೆಝಾನ್‌ ಗೋದಾಮು ಬಳಿ ಎಲ್ಲ ಕಡೆಯಿಂದ ಬರುವ 2 ಸಾವಿರ ಕಾರುಗಳು ಮತ್ತು 3 ಸಾವಿರ ಬೈಕುಗಳ ನಿಲುಗಡೆ.
  • ಎಜೆ ಆಸ್ಪತ್ರೆ ಬಳಿಯ ಕುಂಟಿಕಾನ ಜಂಕ್ಷನ್‌ನಿಂದ ಕಾವೂರು ಜಂಕ್ಷನ್‌ವರೆಗೆ ಬೆಳ್ತಂಗಡಿ ಮತ್ತು ಕಾಸರ ಗೋಡು ಕಡೆಯಿಂದ ಬರುವ 350 ಬಸ್‌ಗಳ ನಿಲುಗಡೆ.
  • ಕೆಪಿಟಿ ಮೈದಾನದಲ್ಲಿ ಮೂಲ್ಕಿ-ಮೂಡುಬಿದಿರೆ ಕಡೆಯಿಂದ ಬರುವ 200 ಬಸ್‌ಗಳನ್ನು ನಿಲ್ಲಿಸಬಹುದು. zಆರ್‌ಟಿಒ ಟ್ರಯಲ್‌ ಮೈದಾನ (ವ್ಯಾಸ ನಗರ)ದಲ್ಲಿ ಪುತ್ತೂರು, ಸುಳ್ಯದಿಂದ ಬರುವ 50 ಬಸ್‌ಗಳಿಗೆ ನಿಲುಗಡೆ.
  • ಪದುವಾ ಕಾಲೇಜು ಮೈದಾನದಲ್ಲಿ ಪುತ್ತೂರು, ಸುಳ್ಯದಿಂದ ಬರುವ 250 ಬಸ್‌ಗಳಿಗೆ ನಿಲುಗಡೆ.
  • ಲಾಲ್‌ಬಾಗ್‌-ಕರಾವಳಿ ಉತ್ಸವ ಮೈದಾನದಲ್ಲಿ ನಗರ ವ್ಯಾಪ್ತಿಯಿಂದ ಬರುವ 250 ಬಸ್‌ಗಳಿಗೆ ನಿಲುಗಡೆ.
  • ಉರ್ವ ಮಾರ್ಕೆಟ್‌ ಮೈದಾನ ಮತ್ತು ಲೇಡಿಹಿಲ್‌ ಪೊಂಪೈ ಚರ್ಚ್‌ ಮೈದಾನದಲ್ಲಿ ಉಳ್ಳಾಲ ತಾಲೂಕಿನಿಂದ ಬರುವ ತಲಾ 100 ಬಸ್‌ಗಳಿಗೆ ನಿಲುಗಡೆ.
  • ಉರ್ವಸ್ಟೋರ್‌ ಮೈದಾನ, ಇನ್ಫೋಸಿಸ್‌ ಹಿಂಭಾಗದ ರಸ್ತೆ ಮೂಲಕ ಕುಂಟಿಕಾನ ತನಕದ ರಸ್ತೆಯಲ್ಲಿ ಬಂಟ್ವಾಳ ತಾಲೂಕಿನಿಂದ ಬರುವ 300 ಬಸ್‌ಗಳಿಗೆ ನಿಲುಗಡೆ. ಕೆ.ಪಿ.ಟಿ. ಕಡೆಯಿಂದ ಆಗಮಿಸುವ ಲಘುವಾಹನ ಮತ್ತು ದ್ವಿಚಕ್ರ ವಾಹನ ಸವಾರರು ಗೋಲ್ಡ್‌ ಪಿಂಚ್ ಮೈದಾನದ ಪೂರ್ವಕ್ಕೆ ಇರುವ ಬಯಲು, ಕೊಟ್ಟಾರ ಚೌಕಿಯಿಂದ ಮಾಲೇಮಾರ್‌ ಮುಖಾಂತರ ಹಾಗೂ ಅಮೆಝಾನ್‌ ಗೋದಾಮು ಪಕ್ಕದಲ್ಲಿನ ಮಾರ್ಗದ ಮುಖಾಂತರ ಹಾಗೂ ಕೂಳೂರು ಹಾಗೂ ಕಾವೂರು ಜಂಕ್ಷನ್‌ ಕಡೆಯಿಂದ ಆಗಮಿಸುವ ಲಘು ವಾಹನಗಳು ಉರುಂಡಾಡಿ ರಸ್ತೆ ಹಾಗೂ ಕೂಳೂರಿನ ಟಾಟಾ ಶೋ ರೂಂ ಮುಂದೆ ಇರುವ ಕೂಳೂರು- ಕಾವೂರು ರಸ್ತೆ ಮುಖಾಂತರ ವಾಹ ನಿಲುಗಡೆ ಸ್ಥಳಕ್ಕೆ ತೆರಳಬಹುದು.
Advertisement

ಉಡುಪಿ ಕಡೆಯಿಂದ ಬರುವ ಘನ ವಾಹನಗಳು, ಗೂಡ್ಸ್‌ ವಾಹನಗಳು ಪಡುಬಿದ್ರಿ ಜಂಕ್ಷನ್‌ನಿಂದ ಕಾರ್ಕಳ- ಬೆಳ್ಮಣ್‌ ಮಾರ್ಗವಾಗಿ ಮೂಡುಬಿದಿರೆ, ಕಿನ್ನಿಗೋಳಿ ಮೂಲಕ ಮಂಗಳೂರು, ಬಂಟ್ವಾಳ, ಮೆಲ್ಕಾರ್‌, ಮುಡಿಪು, ತೊಕ್ಕೊಟ್ಟು, ಪುತ್ತೂರು, ಬೆಂಗಳೂರು, ಮೈಸೂರು ಕಡೆಗೆ ಸಂಚರಿಸಬಹುದು. ಇನ್ನಿತರ ಲಘು ವಾಹನಗಳು ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಮೂಲ್ಕಿಯಿಂದ ಕಿನ್ನಿಗೋಳಿ-ವಿಜಯ ಸನ್ನಿಧಿ-ಕಟೀಲು-ಬಜಪೆ- ಕೈಕಂಬ- ಗುರುಪುರ ಮಾರ್ಗವಾಗಿ ಮಂಗಳೂರು ಕಡೆಗೂ ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡುಬಿದಿರೆ ಮಾರ್ಗವಾಗಿ ಸಾಗಬಹುದು. ಸುರತ್ಕಲ್‌ನಿಂದ ಮಂಗ ಳೂರು ಕಡೆಗೆ ಬರುವ ವಾಹನಗಳು ಕಾನ ರಸ್ತೆ- ಜೋಕಟ್ಟೆ -ಪೊರ್ಕೋಡಿ – ಬಜಪೆ ಕೈಕಂಬ-ಗುರುಪುರ ಮಾರ್ಗ ವಾಗಿ ಮಂಗಳೂರು ಕಡೆಗೂ ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡುಬಿದಿರೆ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗಬಹುದು.

ತಲಪಾಡಿ, ಉಳ್ಳಾಲ ಕಡೆಯಿಂದ ಬಿ.ಸಿ.ರೋಡ್‌, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬೆಂಗಳೂರು, ಮೈಸೂರು ಕಡೆಗೆ ಹೋಗುವ ವಾಹನಗಳು ಕೆ.ಸಿ.ರೋಡ್‌ ಹಾಗೂ ತೊಕ್ಕೊಟ್ಟು-ಮುಡಿಪು ಮಾರ್ಗವಾಗಿ ಬಿ.ಸಿ.ರೋಡ್‌ ಕಡೆಗೆ ಸಂಚರಿಸುವುದು ಹಾಗೂ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು ನಂತೂರು- ವಾಮಂಜೂರು- ಗುರುಪುರ, ಕೈಕಂಬ, ಬಜಪೆ, ಕಟೀಲು- ಕಿನ್ನಿಗೋಳಿ- ಮೂಲ್ಕಿ ಮಾರ್ಗವಾಗಿ ಉಡುಪಿ ಕಡೆಗೆ ಹೋಗಬಹುದು. ಬಸ್‌ ಸಂಚಾರ ವ್ಯತ್ಯಯ ಸಾಧ್ಯತೆ ಫಲಾನುಭವಿ ಮತ್ತು ಸಾರ್ವಜನಿಕರನ್ನು ಸಮಾವೇಶಕ್ಕೆ ಕರೆತರಲು ಸುಮಾರು 150ಕ್ಕೂ ಹೆಚ್ಚಿನ ಸಿಟಿ ಬಸ್‌ಗಳು ತೆರಳಲಿವೆ. ಇದರ ಜತೆ ಮಂಗಳೂರು ಕಮೀಷನರೆಟ್‌ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಹಿನ್ನೆಲೆ, ವಾಹನ ಸಂಚಾರ ಮಾರ್ಪಾಡು ಮಾಡಿರುವುದು ಹಾಗೂ ಸಾರ್ವಜನಿಕರ ಓಡಾಟ ಕಡಿಮೆ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಕೆಲವೊಂದು ಸಿಟಿ ಬಸ್‌ ಕಾರ್ಯಾಚರಣೆ ಕಡಿತಗೊಳಿಸಲು ನಿರ್ಧರಿಸಿದೆ. ಈ ಕಾರಣದಿಂದಾಗಿ ನಗರದಲ್ಲಿ ಶೇ.30ರಷ್ಟು ಬಸ್‌ಗಳು ಮಾತ್ರ ಸಂಚರಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next