Advertisement

ಕೋವಿಡ್ ದೃಢಪಟ್ಟ ಗರ್ಭಿಣಿಯರಿಗೆ ಘೋಷಾ ವರದಾನ

01:33 PM Apr 23, 2021 | Team Udayavani |

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ದೃಢಪಡುವ ಗರ್ಭಿಣಿಯರ ಚಿಕಿತ್ಸೆ ಮತ್ತು ಹೆರಿಗೆಗೆ ಶಿವಾಜಿನಗರದ ಸರ್ಕಾರಿ ಎಚ್‌ಎಸ್‌ಐಎಸ್‌ ಘೋಷಾ ಆಸ್ಪತ್ರೆ ಮೀಸಲಿಡಲಾಗಿದ್ದು, ಕೊರೊನಾ ಸೋಂಕು ದೃಢಪಟ್ಟ ಗರ್ಭಿಣಿಯರಿಗೆ ವರದಾನವಾಗಿದೆ. ನಗರದಲ್ಲಿ ಮಾ.1ರಿಂದ (2021) ಒಟ್ಟು 16 ಜನ ಗರ್ಭಿಣಿಯರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಘೋಷಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ.

Advertisement

ಇವರಲ್ಲಿ ಲಘು ಕೊರೊನಾ ಸೋಂಕಿನ ಲಕ್ಷಣ ಇರುವ ಐದು ಜನ ಗರ್ಭಿಣಿಯರು ಮನೆಯಲ್ಲೇ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದು, ಉಳಿದವರಿಗೆ ಘೋಷಾ ಆಸ್ಪ ತ್ರೆಯಲ್ಲಿ ಆರೈಕೆ ನೀಡಲಾಗುತ್ತಿದೆ. ನಗರದ ಎಲ್ಲ ರೆಫ‌ರಲ್‌ ಮತ್ತು ಹೆರಿಗೆ ಆಸ್ಪತ್ರೆಗಳು ಸೇರಿದಂತೆ ಬಹುತೇಕ ಆಸ್ಪತ್ರೆಗಳು ಗರ್ಭಿಣಿಯರ ಕಾಳಜಿಗೆ ಆದ್ಯತೆ ನೀಡು ತ್ತಿವೆ. ಗರ್ಭಿಣಿಯರ ಹೆರಿಗೆ ನಿಗದಿ ದಿನಕ್ಕಿಂತ 15 ದಿನಗಳ ಮುನ್ನವೇ ಕಡ್ಡಾಯವಾಗಿ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಿ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೆರಿಗೆ ಸಂದರ್ಭ ದಲ್ಲಿ ಸೋಂಕಿನ ಲಕ್ಷಣ ಅಥವಾ ಅನುಮಾನ ಇದ್ದವರನ್ನೂ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಬಿಬಿಎಂಪಿಯ ಕ್ಲಿನಿಕಲ್‌ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ. ನಿರ್ಮಲಾ ಬುಗ್ಗಿ ತಿಳಿಸಿದ್ದಾರೆ.

ಮೊದಲ ಅಲೆ ಅನುಭವ: ನಗರದಲ್ಲಿ ಕೊರೊನಾ ಮೊದಲ ಅಲೆ ಯಲ್ಲಿ ಗರ್ಭಿಣಿಯರ ಕೊರೊನಾ ಪರೀಕ್ಷೆ, ಆರೈಕೆ ಹಾಗೂ ಹೆರಿಗೆ ಸಂಬಂಧಿಸಿದಂತೆ ಗೊಂದಲಗಳು ಇದ್ದವು. ಅಲ್ಲದೆ, ಸಾಲಿನಲ್ಲಿ ಪರೀಕ್ಷೆಗೆ ಒಳಗಾದ ಗರ್ಭಿಣಿಯರಿಗೆ ಯಾರಿಗಾದರೂ ಸೋಂಕು ದೃಢ ಪಟ್ಟರೆ ಸರತಿಯಲ್ಲಿ ನಿಂತ ಉಳಿದವರನ್ನು ಹುಡುಕುವುದು ಸವಾಲಾಗಿ ಪರಿಣಮಿಸುತ್ತಿತ್ತು. ಇದೀಗ ಈ ರೀತಿಯ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗಿದೆ.ಸೋಂಕಿನ ಲಕ್ಷಣ ಅಥವಾ ಅನುಮಾನ ಇರುವವರನ್ನು ಪ್ರತ್ಯೇಕವಾಗಿ ಪರೀಕ್ಷೆಗೆ ಒಳ ಪಡಿಸಲಾಗುತ್ತಿದೆ.

ಪಾಲಿಕೆ ಆಸ್ಪತ್ರೆಗಳಲ್ಲಿ ಹೆರಿಗೆ ಹೆಚ್ಚಳ: ನಗರದಲ್ಲಿ ಕೊರೊನಾ ಸೋಂಕು ತೀವ್ರವಾದ ಮೇಲೆ ಪಾಲಿಕೆಯ ರೆಫ‌ರಲ್‌ ಮತ್ತು ಹೆರಿಗೆ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವವರ ಸಂಖ್ಯೆ ಕಳೆದ ವರ್ಷಗಳಿಗಿಂತ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದೆ.

ಪ್ರತಿ ವರ್ಷ ಅಂದಾಜು 11ರಿಂದ 12 ಸಾವಿರ ಹೆರಿಗೆ ಆಗುತ್ತಿತ್ತು. 2020-21ನೇ ಸಾಲಿನಲ್ಲಿ ಒಟ್ಟು 14,300 ಜನ ಪಾಲಿಕೆಯ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟ ಮತ್ತು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿಲ್ಲಿಸಿದ್ದು, ಸಹ ಇದಕ್ಕೆ ಪರೋಕ್ಷ ಕಾರಣವಾಗಿದೆ ಎಂದು ಬಿಬಿಎಂಪಿಯ ಕ್ಲಿನಿಕಲ್‌ ವಿಭಾಗದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

ಊಟ ನೀಡಲು ಅವಕಾಶ: ಕೊರೊನಾ ಸೋಂಕು ದೃಢಪಟ್ಟು ಘೋಷಾ ಆಸ್ಪತ್ರೆ ಆರೈಕೆಯಲ್ಲಿರುವ ಗರ್ಭಿಣಿಯರಿಗೆ ಅವರ ಕುಟುಂಬದವರಿಂದ ಊಟ ಮತ್ತು ಅಗತ್ಯ ವಸ್ತುಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಕುಟುಂಬದವರು ತಂದುಕೊಡುವ ಊಟ ಮತ್ತು ಅಗತ್ಯ ವಸ್ತುಗಳನ್ನು ಸೆಕ್ಯೂರಿಟಿ ಮತ್ತು ಸಹಾಯಕ ಸಿಬಂದಿ ದೂರದಿಂದಲೇ ತೆಗೆದುಕೊಳ್ಳುತ್ತಾರೆ.

ನಂತರ ಮತ್ತೂಬ್ಬ ಸಿಬ್ಬಂದಿ (ಈ ವೇಳೆ ಪಿಪಿ ಇ ಕಿಟ್‌, ಮಾಸ್ಕ್ ಸೇರಿದಂತೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ) ಸ್ವೀಕರಿಸಿ ಒಳಗೆ ಇರುವ ಗರ್ಭಿಣಿಯರಿಗೆ ನೀಡು ತ್ತಿದ್ದಾರೆ. ಆದರೆ, ಗೇಟ್‌ನ ಒಳಗಡೆ ಹೋಗುವುದಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ.

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next