Advertisement

ಪ್ರೀತಿಗೆ ಜೀವ ತುಂಬಿದ ಪ್ರೇಮಿಗಳು

12:39 PM Apr 02, 2021 | Team Udayavani |

ಚಿಕ್ಕಮಗಳೂರು: ಎಷ್ಟೋ ಪ್ರೀತಿಸಿದ ಮನಸ್ಸುಗಳು ಒಂದಾಗುವ ಮೊದಲೇ ಬೇರೆಯಾದ ನೂರಾರು ನಿದರ್ಶನಗಳುನಮ್ಮ ಕಣ್ಣ ಮುಂದಿವೆ. ಆದರೆ ಇಲ್ಲೊಬ್ಬಯುವಕ ತಾನು ಆರು ವರ್ಷದಿಂದಪ್ರೀತಿಸುತ್ತಿದ್ದ, ವ್ಹೀಲ್‌ಚೇರ್‌ ಮತ್ತು ಮನೆಯವರ ಆಶ್ರಯದಲ್ಲೇ ಬದುಕು ನಡೆಸುತ್ತಿದ್ದ ಹುಡುಗಿಗೆ ಬಾಳು ಕೊಟ್ಟು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾನೆ.ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿಯ “ಸ್ವಪ್ನ ಮತ್ತು ಮನು’ಇಂತಹ ಅಪರೂಪದ ಸನ್ನಿವೇಶಕ್ಕೆಸಾಕ್ಷಿಯಾಗಿದ್ದಾರೆ.

Advertisement

ಇವರದ್ದು ಅಂತರ್‌ಜಾತಿ ವಿವಾಹ. ಸ್ವಪ್ನ ಹತ್ತನೇ ತರಗತಿ ಓದುತ್ತಿದ್ದಾಗ ಅದೇ ಗ್ರಾಮದ ಮನು ಜತೆ ಪ್ರೇಮಾಂಕುರವಾಗುತ್ತದೆ. “ಸ್ವಪ್ನ ಮತ್ತು ಮನು’ ಪಿಯುಸಿವರೆಗೂ ವ್ಯಾಸಂಗಮಾಡಿದ್ದು, ಮನು ಹಾರ್ಡ್‌ವೇರ್‌ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಸ್ಪಪ್ನ ದ್ವಿತೀಯ ಪಿಯುಸಿ ಓದು ಮುಗಿಸಿ ಟೈಪಿಂಗ್‌ ಕ್ಲಾಸ್‌ಗೆ ಹೋಗುತ್ತಿದ್ದಾಗ ಒಂದು ದಿನ ಇದ್ದಕ್ಕಿದ್ದಂತೆ ಕುಸಿದು ಬಿದ್ದು ತನ್ನೆರಡು ಕಾಲುಗಳ ಸ್ವಾ ಧೀನ ಕಳೆದುಕೊಂಡಳು.

ವ್ಹೀಲ್‌ಚೇರ್‌ ಇಲ್ಲದೇ ನಡೆದಾಡಲು ಸಾಧ್ಯವಾಗದ ಸ್ಥಿತಿ ಅವಳದಾಯಿತು. ಮಗಳು ಇದ್ದಕ್ಕಿದಂತೆ ಕಾಲು ಸ್ವಾಧೀನ ಕಳೆದುಕೊಂಡ ಮೇಲೆ ತಂದೆ-ತಾಯಿ ಕರೆದೊಯ್ಯದ ಆಸ್ಪತ್ರೆಯಿಲ್ಲ, ತೋರಿಸದೇ ಇರುವ ವೈದ್ಯರಿಲ್ಲ. ಯಾವುದೇ ವೈದ್ಯರಿಗೆ ತೋರಿಸಿದರೂ ನಿಮ್ಮ ಮಗಳು ಆರೋಗ್ಯವಾಗಿದ್ದಾಳೆ ಎಂದರೆ ಹೊರತುಕಾಲು ಮಾತ್ರ ಮತ್ತೆ ಸ್ವಾ ಧೀನಕ್ಕೆ ಬರಲಿಲ್ಲ.

ಕೇರಳ ವೈದ್ಯರಿಗೆ ತೋರಿಸದ್ದಾಯ್ತು, ನಾಟಿ ಔಷ ಧಿಯನ್ನೂ ಕೊಟ್ಟಾಯ್ತು. ಆದರೂ ಪ್ರಯೋಜನ ಆಗಲಿಲ್ಲ. ಇದರಿಂದ ನೊಂದ ಸ್ವಪ್ನ ತನ್ನ ಬದುಕೇ ಇಷ್ಟು ಎಂದು ಸುಮ್ಮನಾಗಿ ಬಿಟ್ಟಳು.ಇದನ್ನು ಕಣ್ಣಾರೆ ಕಂಡ ಮನು ಹಳ್ಳಿಯಲ್ಲೇಕೆಲಸ ಮಾಡಿಕೊಂಡು ಪ್ರೇಯಸಿಯನ್ನುಕರೆದುಕೊಂಡು ಊರೂರು ಸುತ್ತಿದ. ಕಂಡ ಕಂಡ ವೈದ್ಯರಿಗೆ ತೋರಿಸಿದ.

ಪ್ರಿಯತಮನ ಪ್ರಯತ್ನವೂ ಫಲಿಸಲಿಲ್ಲ.ಇನ್ನೇನು ಮದುವೆ ವಿಚಾರ ಪ್ರಸ್ತಾಪವಾದಾಗ, ಕಾಲು ಸ್ವಾಧೀನ ಕಳೆದುಕೊಂಡಿರುವ ನನ್ನನ್ನುಮದುವೆಯಾಗಿ ಏನ್‌ ಮಾಡ್ತೀಯಾ,ನನ್ನನ್ನು ಮರೆತುಬಿಡು ಎನ್ನುತ್ತಾಳೆ ಸ್ವಪ್ನ. ಆದರೆ ಮನಸ್ಸು ಬದಲಿಸದಮನು “ನಿನ್ನನ್ನೇ ಪ್ರೀತಿಸಿದ್ದೇನೆ, ನಿನ್ನನ್ನೇ ಮದುವೆಯಾಗುತ್ತೇನೆಂದು ಸ್ವಪ್ನಗೆ ಧೈರ್ಯ ತುಂಬಿದ್ದಾನೆ.ಸ್ವಪ್ನ-ಮನು ಮದುವೆ ವಿಚಾರಕ್ಕೆ ಮನು ತಾಯಿಯೂ ಬೆಂಬಲವಾಗಿ ನಿಂತು ಮಗನ ನಿಲುವಿಗೆ ಸಾಥ್‌ ನೀಡಿದ್ದಾರೆ. ನನ್ನ ಮಗ ಇಷ್ಟಪಟ್ಟಿದ್ದಾನೆ ಅಷ್ಟೇ.

Advertisement

ಇದನ್ನೂ ಓದಿ:ಮ್ಯಾನ್ಮಾರ್ ನಿರಾಶ್ರಿತರನ್ನು ವಾಪಸ್ ಕಳುಹಿಸಬೇಡಿ : ಕೇಂದ್ರಕ್ಕೆ ಝೊರಾಮ್ ತಂಗ

ನನಗೆ ಮಗಳು-ಸೊಸೆ ಅವಳೇ ಎಂದಿದ್ದಾರೆ. ಇವರ ಪ್ರೇಮ ವಿವಾಹಕ್ಕೆಇಡೀ ಊರಿನ ಜನರೇ ಬೆನ್ನೆಲು ಬಾಗಿನಿಂತಿದ್ದಾರೆ.ಇತ್ತೀಚೆಗೆ ತಾಲೂಕಿನ ಮಲ್ಲೇನಹಳ್ಳಿಶ್ರೀ ಸುಬ್ರಮಣ್ಯಸ್ವಾಮಿ ಪುಂಗುನಿ ಉತ್ತಿರಿ ಜಾತ್ರಾ ಮಹೋತ್ಸವದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮನು-ಸ್ವಪ್ನದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.ಆರು ವರ್ಷ ಹಿಂದೆ ಹುಟ್ಟಿದ ನಿಷ್ಕಲ್ಮಶ ಪ್ರೀತಿ ಕಾಫಿತೋಟದಲ್ಲಿ ಅರಳಿ ಸಮಾಜಕ್ಕೆ ಮಾದರಿಯಾಗಿದೆ.

ಸ್ಪಪ್ನ ಚೆನ್ನಾಗಿದ್ದಳು. ಇದ್ದಕ್ಕಿದ್ದಂತೆ ಎರಡು ವರ್ಷದ ಹಿಂದೆ ಕಾಲುಸ್ವಾಧೀನ ಕಳೆದುಕೊಂಡಳು. ಕಾಲುಸ್ವಾ ಧೀನ ಕಳೆದುಕೊಂಡಿದ್ದಾಳೆಂದು ಆಕೆಯನ್ನು ಬಿಟ್ಟರೆ ನನ್ನ ಪ್ರೀತಿಗೆ ಬೆಲೆಯೇ ಇಲ್ಲ. ನಾನು ಅವಳನ್ನು ಮನಸಾರೆ ಪ್ರೀತಿಸಿದ್ದೇನೆ. ಅವಳನ್ನೇ ಮದುವೆಯಾಗಿದ್ದೇನೆ. ಮುಂದೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.

ಮನು

10ನೇತರಗತಿಯಲ್ಲಿರುವಾಗ ನಮ್ಮಿಬ್ಬರಲ್ಲಿ ಪ್ರೀತಿ ಉಂಟಾಗಿತ್ತು.ಕಾಲು ಸ್ವಾ ಧೀನ ಕಳೆದುಕೊಂಡನನಗೆ ಮನು ಬೇಜಾರಾಗಬೇಡ.ನಾನು ನಿನ್ನ ಜತೆ ಇರ್ತೇನೆ ಎಂದು ಧೈರ್ಯ ತುಂಬಿದ್ದ. ಈಗ ನನ್ನಕೈ ಹಿಡಿದಿದ್ದು, ಇನ್ನು ನನಗ್ಯಾವಭಯವಿಲ್ಲ. ಖುಷಿಯಾಗುತ್ತಿದೆ.

ಸ್ವಪ್ನ

Advertisement

Udayavani is now on Telegram. Click here to join our channel and stay updated with the latest news.

Next