Advertisement

ಲಾಟರಿ ಆಮಿಷವೊಡ್ಡಿ ಮಕ್ಕಳ ಅಪಹರಣಕ್ಕೆ ಯತ್ನ?

03:52 PM Sep 16, 2021 | Team Udayavani |

ಕೋಲಾರ: ಗೃಹೋಪಕರಣಗಳನ್ನು ಲಾಟರಿಮೂಲಕ ನೀಡುವ ಆಸೆ ತೋರಿಸಿ ಮಕ್ಕಳನ್ನು ಅಪಹರಣ ಮಾಡಲು ಯತ್ನಿಸಲಾಗಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಸ್ಥಳೀಯರೇ ಕಾರನ್ನು ಜಖಂಗೊಳಿಸಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ರಹಮತ್‌ ನಗರದಲ್ಲಿ ನಡೆದಿದೆ.

Advertisement

ಈ ಸಂಬಂಧ ಅನುಮಾನದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಗಲ್‌ಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇವರು ಮಕ್ಕಳ ಅಪಹರಣಕಾರರೇ ಅಥವಾ ಗೃಹೋಪಕರಣಗಳನ್ನು ಲಾಟರಿ ಮೂಲಕ ಮಾರಾಟ ಮಾಡುವವರೇ ಎಂಬುದು ಇನ್ನೂ ಖಚಿತಪಟ್ಟಿಲ್ಲ.

ಲಾಟರಿ ಆಸೆ ತೋರಿಸಿ ಮಕ್ಕಳ ಅಪಹರಣ?: 100 ರೂ.ಗೆ ಒಂದು ಲೈಟ್‌ ಖರೀದಿಸಿದರೆ ನಿಮಗೆ ನೀಡುವ ಕಾರ್ಡ್‌ ಮೇಲಿನ ಭಾಗವನ್ನು ಕ್ರಾಚ್‌ ಮಾಡಿದರೆ ಅಲ್ಲಿನ ಸಂಖ್ಯೆಗೆ ಅನುಗುಣವಾಗಿ ಫ್ಯಾನ್‌, ಪ್ಲಾಸ್ಕ್, ಕುಕ್ಕರ್‌, ಹಾಟ್‌ಬಾಕ್ಸ್‌ ಮತ್ತಿತರ ವಸ್ತು ನೀಡುವುದಾಗಿ ರಹಮತ್‌ ನಗರದಲ್ಲಿ ತಿಳಿಸಿ ಮಾರಾಟ ಮಾಡಿದ್ದಾರು ಎನ್ನಲಾಗಿದೆ. ಇದಾದ ನಂತರ ಲೈಟ್‌ ಖರೀದಿಸಿದವರಿಗೆ ನೀಡಲಾದ ಕಾರ್ಡ್‌ನಲ್ಲಿನ ಸಂಖ್ಯೆಗೆ ಅನುಗುಣವಾಗಿ ಬಹುಮಾನ ನೀಡಲಿದ್ದು, ತಮ್ಮ ಓಮ್ನಿ ಕಾರಿನಲ್ಲಿದೆ. ಅಲ್ಲಿಗೆ ಮಕ್ಕಳನ್ನು ಕಳುಹಿಸಿದರೆ ಕೊಟ್ಟು ಕಳುಹಿಸುವುದಾಗಿ ರಹಮತ್‌ ನಗರದಿಂದ ಪಕ್ಕದ ಅರಹಳ್ಳಿ ಗೇಟ್‌ ಬಳಿಗೆಕರೆದುಕೊಂಡುಹೋಗಿದ್ದರುಎನ್ನಲಾಗಿದೆ.

ಇದನ್ನೂ ಓದಿ:ಇಬ್ಬರು ವಿದ್ಯಾರ್ಥಿಗಳ ಖಾತೆಗೆ ಬಂತು 900 ಕೋಟಿ ರೂ.|ಎಟಿಎಂಗಳಿಗೆ ಮುಗಿ ಬಿದ್ದ ಹಳ್ಳಿಗರು

ಪೊಲೀಸರ ವಶಕ್ಕೆ: ಆರೋಪಿಗಳ ಜತೆ ಓಮ್ನಿಕಾರಿನತ್ತ ಬಂದ ಮಕ್ಕಳನ್ನು ಕಾರಿಗೆ ಹತ್ತಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಅಲ್ಲೇ ಇದ್ದ ಕೆಲವರು ಸ್ಥಳೀ ಯರು ಮೂವರು ಆರೋಪಿಗಳನ್ನು ಹಿಡಿದು ಗಲ್‌ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಓಮ್ನಿ ಕಾರು ಹಾಗೂ ಅದರಲ್ಲಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ವಿಚಾರಣೆ ಮುಂದುವರಿದಿದ್ದು, ಅವರು ಅಪಹರಣಕಾರರೇ ಅಲ್ಲವೇ ಎಂಬುದು ಇನ್ನೂ ದೃಢಪಟ್ಟಿಲ್ಲ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next