Advertisement

ರಾಯುಡು ಕ್ರಿಕೆಟ್‌ ವಿದಾಯ

01:22 AM Jul 04, 2019 | Sriram |

ಹೊಸದಿಲ್ಲಿ: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ಅಂಬಾಟಿ ರಾಯುಡು ಬುಧವಾರ ದಿಢೀರನೇ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. ಆದರೆ ತಮ್ಮ ಈ ನಿರ್ಧಾರಕ್ಕೆ ಅವರು ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ.

Advertisement

ಪ್ರಸಕ್ತ ವಿಶ್ವಕಪ್‌ ಪಂದ್ಯಾವಳಿಯ ವೇಳೆ ಮೀಸಲು ಆಟಗಾರರ ಯಾದಿಯಲ್ಲಿದ್ದ 33ರ ಹರೆಯದ ರಾಯುಡು ಎರಡೂ ಸಲ ಬದಲಿ ಕ್ರಿಕೆಟಿಗನಾಗಿ ತಂಡ ಸೇರುವ ಅವಕಾಶದಿಂದ ವಂಚಿತರಾಗಿದ್ದರು. ಇದರಿಂದ ನೊಂದು ವಿದಾಯದ ನಿರ್ಧಾರಕ್ಕೆ ಬಂದಿರಬಹುದೆಂದು ಊಹಿಸಲಾಗಿದೆ.
ಆರಂಭಕಾರ ಶಿಖರ್‌ ಧವನ್‌ ಹೊರ ಬಿದ್ದಾಗ ರಿಷಭ್‌ ಪಂತ್‌ ಅವರಿಗೆ ಆದ್ಯತೆ ನೀಡಿದರೆ, ಮೊನ್ನೆ ವಿಜಯ್‌ ಶಂಕರ್‌ ತಂಡದಿಂದ ಬೇರ್ಪಟ್ಟಾಗ ಮೀಸಲು ಯಾದಿ ಯಲ್ಲೇ ಇಲ್ಲದ ಅಗರ್ವಾಲ್‌ ಅವರನ್ನು ಕರೆಸಿಕೊಳ್ಳಲಾಗಿತ್ತು. ಇದರಿಂದ ರಾಯುಡು ನೊಂದಿರುವ ಸಾಧ್ಯತೆ ಇದೆ.

ಸ್ಟಾರ್‌ ಕ್ರಿಕೆಟಿಗನಲ್ಲ…
ಅಂಬಾಟಿ ರಾಯುಡು ದೇಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದರೂ ಅಂತಾ ರಾಷ್ಟ್ರೀಯ ಮಟ್ಟದ ಸ್ಟಾರ್‌ ಕ್ರಿಕೆಟಿಗನೇನಲ್ಲ. 55 ಏಕದಿನ ಪಂದ್ಯಗಳಲ್ಲಿ ಆಡಿರುವ ರಾಯುಡು 47.05ರ ಸರಾಸರಿಯಲ್ಲಿ 1,694 ರನ್‌ ಗಳಿಸಿದ್ದಾರೆ. ಇದರಲ್ಲಿ 3 ಶತಕ, 10 ಅರ್ಧ ಶತಕ ಸೇರಿದೆ. ಅಜೇಯ 124 ರನ್‌ ಅತ್ಯಧಿಕ ಗಳಿಕೆ.6 ಟಿ20 ಪಂದ್ಯಗಳನ್ನೂ ಆಡಿದ್ದಾರೆ. ಆದರೆ ಟೆಸ್ಟ್‌ ತಂಡದ ಬಾಗಿಲು ಮಾತ್ರ ತೆರೆಯಲಿಲ್ಲ. ಐಪಿಎಲ್‌ ಪ್ರದರ್ಶನ ಅಮೋಘ ಮಟ್ಟದಲ್ಲಿತ್ತು.

ಬಹಳ ಸಮಯದ ಬಳಿಕ ಅಚ್ಚರಿಯ ಕರೆ ಪಡೆದು, ವಿಶ್ವಕಪ್‌ಗ್ೂ ಮುನ್ನ ಏಕದಿನ ತಂಡದ ಮಧ್ಯಮ ಕ್ರಮಾಂಕದಲ್ಲಿ ಭರವಸೆಯ ಪ್ರದರ್ಶನ ನೀಡಿದ್ದರು. ಹೀಗಾಗಿ ವಿಶ್ವಕಪ್‌ ಸಂಭಾವ್ಯ ಆಟಗಾರರ ಯಾದಿಯಲ್ಲಿ ರಾಯುಡು ಕೂಡ ಕಾಣಿಸಿ ಕೊಂಡಿದ್ದರು. ಕೊನೆಯಲ್ಲಿ ಮೀಸಲು ಆಟಗಾರನಾಗಷ್ಟೇ ಉಳಿದರು.

ಏಕದಿನ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸುವ ಸಲುವಾಗಿ ಅಂಬಾಟಿ ರಾಯುಡು ಕಳೆದ ವರ್ಷ ಪ್ರಥಮ ದರ್ಜೆ ಕ್ರಿಕೆಟಿಗೆ ಗುಡ್‌ಬೈ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

ನಿಷೇಧದ ಅನುಭವ 2007ರ ಬಂಡಾಯ ಐಸಿಎಲ್‌ನಲ್ಲಿ ಭಾಗ ವಹಿಸಿ ನಿಷೇಧಕ್ಕೊಳಗಾದ 79 ಕ್ರಿಕೆಟಿ ಗರಲ್ಲಿ ರಾಯುಡು ಕೂಡ ಒಬ್ಬರು. ಬಳಿಕ 2013ರಲ್ಲಿ ಜಿಂಬಾಬ್ವೆ ಎದುರಿನ ಸರಣಿಗಾಗಿ ಭಾರತ ತಂಡವನ್ನು ಪ್ರವೇಶಿಸಿದರು. ಐಪಿಎಲ್‌ ಅವಕಾಶ ಪಡೆದು ಮುಂಬೈ ಇಂಡಿಯನ್ಸ್‌ ಪರ ಆಡಿದರು (2010-2017). ಕಳೆದ ಎರಡು ವರ್ಷಗಳಲ್ಲಿ ಚೆನ್ನೈ ತಂಡದ ಪ್ರತಿನಿಧಿಯಾಗಿದ್ದರು. ಕಳೆದ ವರ್ಷ ಸಯ್ಯದ್‌ ಮುಷ್ತಾಕ್‌ ಅಲಿ ಟೂರ್ನಿ ವೇಳೆ ಮೈದಾನದ ಅಂಪಾಯರ್‌ಗಳ ಜತೆ ಜಗಳವಾಡಿ 2 ಪಂದ್ಯಗಳ ನಿಷೇಧಕ್ಕೂ ಸಿಲುಕಿದ್ದರು.

ಆಯ್ಕೆ ಸಮಿತಿ ವಿರುದ್ಧ ಹರಿಹಾಯ್ದ ಗಂಭೀರ್‌
ಅಂಬಾಟಿ ರಾಯುಡು ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ವಿರುದ್ಧ ಮಾಜಿ ಕ್ರಿಕೆಟಿಗ ಗಂಭೀರ್‌ ಗರಂ ಆಗಿದ್ದಾರೆ.

“ರಾಯುಡು ವಿಶ್ವಕಪ್‌ಗೆ ಆಯ್ಕೆ ಯಾಗುವ ನಿರೀಕ್ಷೆ ಇಟ್ಟು ಕೊಂಡಿದ್ದರು. ಆ ಸಾಮರ್ಥ್ಯವೂ ಅವರಲ್ಲಿತ್ತು. ನನ್ನ ಪ್ರಕಾರ ಆಯ್ಕೆ ಸಮಿತಿ ರಾಯುಡುರನ್ನು ನಿರ್ಲ ಕ್ಷಿಸಿದೆ. ಇದರಿಂದ ಮನನೊಂದು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆಯ್ಕೆ ಸಮಿತಿಯ 5 ಮಂದಿ ಸದಸ್ಯರ ಒಟ್ಟು ರನ್‌ ಸೇರಿಸಿದರೂ ರಾಯುಡು ಅಂತಾ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಡಿದ ರನ್‌ಗೆ ಸಾಟಿಯಾಗು ವುದಿಲ್ಲ’ ಎಂದು ಗಂಭೀರ್‌ ಕಿಡಿಕಾರಿದ್ದಾರೆ.

ಅಂಬಾಟಿ ರಾಯುಡುಗೆ
ಐಸ್‌ಲ್ಯಾಂಡ್‌ಕ್ರಿಕೆಟ್‌ ಆಫ‌ರ್‌
ಅಂಬಾಟಿ ರಾಯುಡುಗೆ ಐಸ್‌ಲ್ಯಾಂಡ್‌ ಕ್ರಿಕೆಟ್‌ ವಿಶೇಷ ಆಫ‌ರ್‌ ನೀಡಿದೆ. “ನೀವು ನಮ್ಮ ದೇಶದ ಪರ ಆಡಲು ಬಯಸುವುದಾದರೆ ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ, ನಿಮಗೆ ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ. ನಿಮ್ಮ ಆಟವನ್ನು ನಾವು ಪ್ರೀತಿಸುತ್ತೇವೆ. ನಿಮಗಾಗಿ ಅರ್ಜಿ ನಮೂನೆಯೊಂದನ್ನು ಹಾಕಿದ್ದೇವೆ. ಅದರಲ್ಲಿ ನೀಡಿರುವ ಮಾಹಿತಿಯಲ್ಲಿ ಪೂರ್ಣಗೊಳಿಸಿ ಬನ್ನಿ ನಮ್ಮಲ್ಲಿಗೆ’ ಎಂದು ಅರ್ಜಿ ಸಮೇತ ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಹಲವಾರು ಅಭಿಮಾನಿಗಳು “ನೀವು ಐಸ್‌ಲ್ಯಾಂಡ್‌ ತಂಡದ ಪರ ಕ್ರಿಕೆಟ್‌ ಆಡಬೇಕು’ ಎಂದು ರಾಯುಡು ಅವರನ್ನು ಒತ್ತಾಯಿಸಿದ್ದಾರೆ.

ಬಿಸಿಸಿಐಗೆ
ಇ-ಮೇಲ್‌
“ನಾನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದೂರ ಸರಿಯು ತ್ತಿದ್ದೇನೆ. ಈ ಸಂದರ್ಭದಲ್ಲಿ ಬಿಸಿಸಿಐ, ನಾನು ಪ್ರತಿನಿಧಿಸಿದ ಹೈದರಾಬಾದ್‌, ಆಂಧ್ರ ಮತ್ತು ವಿದರ್ಭ ಕ್ರಿಕೆಟ್‌ ಮಂಡಳಿಗಳಿಗೆ ಕೃತಜ್ಞತೆಗಳು. ದೇಶವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದ್ದು ದೊಡ್ಡ ಗೌರವ ಹಾಗೂ ಹೆಮ್ಮೆ ಎಂದು ಭಾವಿಸಿದ್ದೇನೆ’ ಎಂದು ರಾಯುಡು ಬಿಸಿಸಿಐಗೆ ಇ-ಮೇಲ್‌ ಮಾಡಿದ್ದಾರೆ. ತನ್ನ ನಾಯಕರಾದ ಧೋನಿ, ರೋಹಿತ್‌ ಮತ್ತು ಕೊಹ್ಲಿ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.

ತ್ರೀಡಿ ಗ್ಲಾಸ್‌ಗಳಿಗೆ ಆರ್ಡರ್‌!
ಅಂಬಾಟಿ ರಾಯುಡು ಅವರನ್ನು ವಿಶ್ವಕಪ್‌ನಿಂದ ಕೈಬಿಟ್ಟ ಕ್ರಮವನ್ನು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಸಮರ್ಥಿಸಿಕೊಂಡಿದ್ದರು. ವಿಜಯ್‌ ಶಂಕರ್‌ ಅವರಲ್ಲಿ “ತ್ರೀ-ಡೈಮೆನ್ಶನಲ್‌’ ಕೌಶಲ ಇರುವ ಕಾರಣ ವಿಶ್ವಕಪ್‌ಗೆ ಆರಿಸಲಾಯಿತು ಎಂದಿದ್ದರು. ಇದಕ್ಕೆ ರಾಯುಡು, “ನಾನು ವಿಶ್ವಕಪ್‌ ವೀಕ್ಷಿಸಲು ಈಗಷ್ಟೇ 3ಡಿ ಗ್ಲಾಸ್‌ಗಳಿಗೆ ಆರ್ಡರ್‌ ಕೊಟ್ಟಿದ್ದೇನೆ’ ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next