Advertisement

ಯಶಸ್ವಿಯಾಗದ ಬೇತಮಂಗಲ ಗುರ್ರಮ್ಮನ ಕುಂಟೆ ಸರ್ವೇ ಕಾರ್ಯ :

03:36 PM Aug 30, 2021 | Team Udayavani |

ಬೇತಮಂಗಲ : ಬೇತಮಂಗಲ ಗ್ರಾಮದ ಸರ್ವೇ ನಂ.192 ಗುರ್ರಮ್ಮನ ಕುಂಟೆ 26 ಗುಂಟೆ ಸರ್ಕಾರಿ ಕರಾಬು ಜಮೀನನ್ನು ಕೆಲವರು ಅಕ್ರಮ ಖಾತೆಗಳನ್ನು ಮಾಡಿಕೊಂಡಿರುವ ಬಗ್ಗೆ ಅಂಬೇಡ್ಕರ್ ಸೇವಾ ಸಮಿತಿಯಿಂದ ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನಲೆ ಕಂದಾಯ ಅಧಿಕಾರಿಗಳು ನಿಗಧಿಯಂತೆ ಸೋಮವಾರ ನಡೆಸಿದ ಸರ್ವೇ ಕಾರ್ಯ ಆರಂಭಿಸಿದರೂ ಪೂರ್ಣಗೊಂಡಿಲ್ಲ.

Advertisement

ಗ್ರಾಮದ ಬಸ್ ನಿಲ್ಧಾಣದ ಬಳಿ ಇರುವ ಈ ಗುರ್ರಮ್ಮನ ಕುಂಟೆಯ ಪ್ರದೇಶವನ್ನು ಕೆಲವರು ಒತ್ತುವರಿ ಮಾಡಿಕೊಂಡು ಗ್ರಾಪಂಯಲ್ಲಿ ಖಾತೆಗಳನ್ನು ಸಹ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಹಸೀಲ್ದಾರ್, ಎ.ಸಿ ಸೇರಿದಂತೆ ಸಂಭಂಧಿಸಿದ ಎಲ್ಲಾ ಅಧಿಕಾರಿಗಳಿಗೂ ದಾಖಲೆ ಸಮೇತ ದೂರು ನೀಡಿದ್ದು, ನಮ್ಮ ಮನವಿಗೆ ತಕ್ಷಣ ಸ್ಪಂದಿಸಿ ಸರ್ವೇ ಮಾಡಿದ್ದು, ನಮಗೆ ತೃಪ್ತಿ ತಂದಿದೆ ಸರ್ವೇ ಅಧಿಕಾರಿಗಳು ಸದರಿ ಜಮೀನಿನ ಬಗ್ಗೆ ಸಮರ್ಪಕವಾಗಿ ವರದಿ (ರಿಪೋರ್ಟ್) ನೀಡುವ ಭರವಸೆ ಇದೆ ಎಂದು ದಲಿತ ಮುಖಂಡ ಸಂದೇಶ್ ಹೇಳಿದರು.

ಬೇತಮಂಗಲ ಗ್ರಾಮದಲ್ಲಿ ಆಸ್ತಿಗಳಿಗೆ ದುಬಾರಿ ಬೆಲೆಯಿದ್ದು, ಒತ್ತುವರಿದಾರರು ಮತ್ತು ಕೆಲ ಅಕ್ರಮ ಖಾತೆದಾರರಿಂದ ಅಧಿಕಾರಿಗಳಿಗೆ ಕಿರಿ-ಕಿರಿ ಮತ್ತು ತೊಂದರೆಯ ನಡುವೆಯೂ ಸರ್ವೇ ಕಾರ್ಯ ನಡೆದಿದ್ದು, ಸತ್ಯಾ ಸತ್ಯೆತೆ ಹೊರ ಬೀಳುವ ವಿಶ್ವಾಸವಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಹುಡುಗಿಯರಿಗೆ ಪುರುಷರು ಪಾಠ ಮಾಡುವಂತಿಲ್ಲ : ತಾಲಿಬಾನ್ ಹೊಸ ಆದೇಶ

ಅಧಿಕಾರಿಗಳಿಗೆ ಭೀತಿ: ಕಾಮಸಮುದ್ರದ ತೊಪ್ಪನಹಳ್ಳಿಯ ಸರ್ವೇ ವೇಳೆ ತಾಹಸೀಲ್ದಾರ್ ಹತ್ಯೆಯಿಂದ ಭೀತಿಗೊಳಗಾಗಿದ್ದ ಅಧಿಕಾರಿಗಳಿಗೆ ಬೇತಮಂಗಲದಲ್ಲಯೂ ಕೋಟ್ಯಾಂತರ ರೂಗಳು ಬೆಲೆ ಬಾಲುವ ಈ ವಾಣಿಜ್ಯ ಕಟ್ಟಡಗಳ ಸರ್ವೇ ವೇಳೆ ಅನಾಹುತಾ ನಡೆಯ ಬಹುದಾ ಎಂಬ ಬೀತಿಯಿಂದ ಬಾರೀ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

Advertisement

ಶೀಘ್ರ ಕಟ್ಟಡಗಳ ತೆರವು: ಸರ್ವೇ ವೇಳೆ 26 ಗುಂಟೆಯ ಗುರ್ರಮ್ಮ ಕುಂಟೆ ಒತ್ತುವರಿಯಿಂದ ಕುಂಟೆಯೇ ಮಾಯವಾಗಿ ಈ ಭಾಗದಲ್ಲಿ ಬೃಹತ್ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ ಸುಮಾರು ವರ್ಷಗಳಿಂದ ಲಕ್ಯಾಂತರ ರೂಗಳ ಬಂಡವಾಳ ಮಾಡಿಕೊಂಡಿದ್ದು, ಶೀಘ್ರದಲ್ಲೇ ಕಟ್ಟಡಗಳ ತೆರವಿಗೆ ನ್ಯಾಯಲಯ ಮೂಲಕ ಆದೇಶ ತರುವುದಾಗಿ ಸಂಧೇಶ್ ತಿಳಿಸಿದರು.
26 ಗುಂಟೆ ಜಮೀನು ಸರ್ವೇ ಮಾಡಲು ಈ ಪ್ರದೇಶ ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವುದರಿಂದ 3 ಕಡೆ ರಸ್ತೆ ಮತ್ತು ವಾಣಿಜ್ಯ ಕಟ್ಟಡಗಳಿಂದ ಸಮಸ್ಯೆಯಾಗಿದೆ ಸಂಪೂರ್ಣವಾಗಿ ಸರ್ವೇ ಮಾಡಿ ಹದ್ದು, ಬಸ್ತು ನಿರ್ಮಿಸಿಲು ಅಸಾಧ್ಯವಾದ ಹಿನ್ನಲೆ ಮುಂದೂಡಲಾಗಿದೆ.

ಹಾಗೂ ಈ ಭಾಗದಲ್ಲಿ ಕೆಲವು 1997 ಮತ್ತು 67ರಲ್ಲಿ ಡೀಸಿ ಕನ್ವರ್ಷನ್ ಆಗಿವೆ ಮತ್ತು ಕೆಲವು ಗ್ರಾಪಂಯಿಂದ ಈ ಖಾತೆಗಳಾಗಿದ್ದು, ಸಂಪೂರ್ಣ ದಾಖಲೆಗಳನ್ನು ಸಂಗ್ರಹಿಸಿ ಸರ್ವೇ ಅಧಿಕಾರಿಗಳಿಂದ ಇಂದಿನ ಸರ್ವೇ ಕಾರ್ಯ ಬಗ್ಗೆ ವರದಿ ಬಂದ ಮೇಲೆ ಮುಂದಿನ ಕ್ರಮದ ಬಗ್ಗೆ ತಿಳಿಸಲಾಗುವುದೆಂದು ಉಪ ತಾಹಸೀಲ್ದಾರ್ ಧಮೇಂದ್ರ ಪ್ರಸಾದ್ ತಿಳಿಸಿದರು.

ಸಾಧ್ಯವಾದ ಕಡೆ ಮಾತ್ರ ಸಿಬ್ಭಂದಿಯ ಮೂಲಕ ಸರ್ವೇ ಅಧಿಕಾರಿಯು ಅಳತೆ ಮಾಡಿ 2 ದಿನಗಳೊಳಗೆ ವರದಿ ನೀಡುವುದಾಗಿ ತಿಳಿಸಿದರು.

ಈ ಸರ್ವೇ ಕಾರ್ಯದಲ್ಲಿ ಉಪ ತಹಸೀಲ್ದಾರ್ ಧಮೇಂದ್ರ ಪ್ರಸಾದ್, ಕಂದಾಯ ಅಧಿಕಾರಿ ಮುನಿವೆಂಕಟಸ್ವಾಮಿ, ಗ್ರಾಮ ಲೆಕ್ಕಿಗ ಮಹೇಶ್ ರೆಡ್ಡಿ, ಸರ್ವೇ ಅಧಿಕಾರಿ ಮೌಲಾಖಾನ್ ಮತ್ತು ಸಿಬ್ಬಂದಿ ವರ್ಗ, ಪೊಲೀಸ್ ಇಲಾಖೆ ಮತ್ತು ಬೇತಮಂಗಲ ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next