Advertisement

ಮೀರಾ ವಿರುದ್ಧ ದಲಿತ ಸಂಘಟನೆಗಳ ಕಿಡಿ

02:54 PM Feb 07, 2021 | Team Udayavani |

ಭಾರತೀನಗರ: ಸಾಹಿತಿ ಪ್ರೊ.ಭಗವಾನ್‌ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಹೊರಟ ಪ್ರತಿಭಟನಾನಿರತರು ವಕೀಲೆ ಮೀರಾ ರಾಘವೇಂದ್ರ ಅವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಮಾಜಿ ಸದಸ್ಯ ಎಚ್‌. ಹೊಂಬಯ್ಯ ಮಾತನಾಡಿ, ಸಾಹಿತಿ ಪೊ.ಭಗವಾನ್‌ ಮುಖಕ್ಕೆ ಬಳಿದ ಮಸಿ ಯನ್ನು ಸೋಪು ಹಾಕಿ ತೊಳೆಯಬಹುದು. ಆದರೆ ಮೀರಾ ರಾಘವೇಂದ್ರ ತಮ್ಮ ವ್ಯಕ್ತಿತ್ವಕ್ಕೆ  ಬಳಿದುಕೊಂಡ ಮಸಿ ಎಂದಿಗೂ ಅಳಿಸಲಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೈಭೀಮ್‌ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ ಮಾತನಾಡಿ, ವಕೀಲೆ ಮೀರಾ ರಾಘವೇಂದ್ರ ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಿ ನ್ಯಾಯದೇವತೆ ಮುಖಕ್ಕೆ ಮಸಿ ಬಳೆದಿದ್ದಾರೆ. ಇದೊಂದು ಅಮಾನವೀಯ ಕೃತ್ಯ ಎಂದು ಕಿಡಿಕಾರಿದ್ದಾರೆ.

ಪ್ರಚಾರದ  àಳಿನಿಂದಾಗಿ ಮುಂದಾಲೋಚನೆ ಮಾಡಿ ಪೊ›.ಭಗವಾನ್‌ ರವರ ಮುಖಕ್ಕೆ ಮಸಿ ಬಳಿದು ವಕೀಲೆ ಮೀರಾ ರಾಘವೇಂದ್ರ ಅನಾಗರೀಕರಾಗಿ ನಡೆದುಕೊಂಡು ಅಸಂವಿಧಾನಿಕ ಹಾದಿ ಹಿಡಿದ್ದಾರೆ ಎಂದರು.

Advertisement

ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್‌ ಮಾತನಾಡಿ, ದೇವರೆಂದು ಪೂಜಿಸುವ ನ್ಯಾಯಾಲಯದ ಆವರಣದಲ್ಲಿ ಇಂತಹ ಅವಮಾನಕರ ಘಟನೆ ನಡೆದಿದೆ. ಪ್ರೊ.ಭಗವಾನ್‌ ಮುಖಕ್ಕೆ ಮಸಿ ಬಳಿದಿರುವುದು ಖಂಡನೀಯ ವಾಗಿದ್ದು ವಕೀಲೆ ಮೀರಾ ರಾಘವೇಂದ್ರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಇದನ್ನೂ ಓದಿ :ತೈಲ ಬೆಲೆ ಹೆಚ್ಚಳಕ್ಕೆ ಕಡಿವಾಣ ಹಾಕಿ

ಬಳಿಕ, ಪ್ರತಿಭಟನಾನಿರತರು ನಂತರಉಪತಹಶೀಲ್ದಾರ್‌ ಬಸವಲಿಂಗೇಗೌಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಹುಲಿಗೆರೆಪುರ ಮಹದೇವು, ಗುಡಿಗೆರೆ ಬಸವರಾಜು, ಅಂಬರೀಶ್‌, ನಾಗಭೂಷಣ್‌, ಕೆ.ಶೆಟ್ಟಹಳ್ಳಿ ಬೊಮ್ಮಲಿಂಗಯ್ಯ, ಅಣ್ಣೂರು ರಾಮಣ್ಣ, ಕೊಪ್ಪ ಸುಂದ್ರೇಶ್‌, ಕೆಂಪರಾಜು, ನಂಜಪ್ಪ, ಮಣಿಗೆರೆ ಕಬ್ಟಾಳಯ್ಯ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next