Advertisement

ಮದ್ದೂರು ಪುರಸಭೆ ಸದಸ್ಯೆ ಏಕಾಂಗಿ ಪ್ರತಿಭಟನೆ

03:42 PM Feb 11, 2021 | Team Udayavani |

ಮದ್ದೂರು: ಪುರಸಭೆ ವ್ಯಾಪ್ತಿಯ ಒಳಚರಂಡಿ ನಿರ್ವಹಣೆ ಸಂಬಂಧದ ಯುಜಿಡಿ ಜೆಟ್‌ವೆಲ್‌ ಮಿಷನ್‌ ದುರಸ್ತಿ ಸಂಬಂಧ 2.5 ಲಕ್ಷ ರೂ.ಗಳ ಅಕ್ರಮ ಬಿಲ್‌ ಸೃಷ್ಟಿಸಿದ್ದು, ಈ ಕುರಿತು ಸ್ಪಷ್ಟ ಮಾಹಿತಿ ನೀಡದ ಕ್ರಮ ಖಂಡಿಸಿ ಸದಸ್ಯೆ ಪ್ರಿಯಾಂಕ ಅಪ್ಪುಗೌಡ ಪುರಸಭೆ ಕಚೇರಿ ಮುಖ್ಯ ದ್ವಾರದ ಬಳಿ ಏಕಾಂಕಿ ಪ್ರತಿಭಟನೆ ಮಾಡಿದರು. ಜೆಟ್‌ವೆಲ್‌ ಮಿಷನ್‌ ದುರಸ್ತಿಗೆ ಇಲ್ಲದ ನೆಪ ಹೇಳಿ ಮುಂದಾಗಿರುವ ಪುರಸಭೆ ಅಧಿಕಾರಿಗಳು, ನಕಲಿ ಬಿಲ್‌ ಸೃಷ್ಟಿಸಿ ಸಾರ್ವಜನಿಕ ಹಣ ದುರುಪಯೋಗಕ್ಕೆ ಮುಂದಾ ಗಿದ್ದು, ಈ ಕುರಿತಾಗಿ ತನಿಖೆಗೆ ಒತ್ತಾಯಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ದೂರಿದರು.

Advertisement

ಇದನ್ನೂ ಓದಿ:ವಿಜಯನಗರ ಸಾಮ್ರಾಜ್ಯ ಪತನಕ್ಕೆ ಸಜ್ಜಾದ ಸಿಂಗ್‌

ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆ: ಈ ಹಿಂದೆ ಮೇಲಿನ ವಿಚಾರವಾಗಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ಪರಿಗಣಿಸದೆ ದುರಸ್ತಿ ಬಿಲ್‌ಗೆ ಅಂಕಿತ ಹಾಕುವ ಮೂಲಕ ಅಕ್ರಮವೆಸಗಿದ್ದು, ಈ ಕುರಿತು ಜಿಲ್ಲಾಧಿ ಕಾರಿಗಳಿಗೆ ದೂರು ಸಲ್ಲಿಸುವುದಾಗಿ ಹೇಳಿದರು. ಪುರಸಭೆ ಅಧ್ಯಕ್ಷ ಸುರೇಶ್‌ಕುಮಾರ್‌ ಅವರು ಪ್ರಿಯಾಂಕ ಅವರ ಮನವೊಲಿಸಿ, ಸದರಿ ಯುಜಿಡಿ ನಿರ್ವಹಣಾ ಯಂತ್ರ ರಿಪೇರಿ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತಾಗಿ ತಜ್ಞರನ್ನು ಕರೆಸಿ ಮಾಹಿತಿ ನೀಡುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next