Advertisement

ಭೂ ಪರಿವರ್ತನೆ ತ್ವರಿತ ಸೇವೆಗೆ ನಿರ್ಮಾಣ ತಂತ್ರಾಂಶ

10:16 AM Jun 11, 2019 | keerthan |

ಉಡುಪಿ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಸಾರ್ವಜನಿಕರು ಬಡಾವಣೆ ನಿರ್ಮಾಣ ನಕ್ಷೆ, ಭೂ ಪರಿವರ್ತನೆಗೆ ಸಂಬಂಧಿಸಿದ ಅರ್ಜಿ ಹಿಡಿದು ಕಚೇರಿಗೆ ಹೋಗಬೇಕಾಗಿಲ್ಲ, ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸಬೇಕಾಗಿಲ್ಲ. ಪೂರಕ ದಾಖಲೆಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಿ ತತ್‌ಕ್ಷಣ ಪರವಾನಿಗೆ ಪಡೆಯಬಹುದಾಗಿದೆ.

Advertisement

ರಾಜ್ಯ ಸರಕಾರ ಮಹಾನಗರ ಪಾಲಿಕೆ ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂ. ವ್ಯಾಪ್ತಿಯಲ್ಲಿ ಪಾರದರ್ಶಕ ಆಡಳಿತ ಹಾಗೂ ತ್ವರಿತ ಕಾರ್ಯಕ್ಕಾಗಿ ಆನ್‌ಲೈನ್‌ ಸೇವೆ ಆಳವಡಿಸಿದೆ. ಐಡಿಎಸ್‌ಐ ಸಂಸ್ಥೆಯು ನಿರ್ಮಾಣ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಇದು ಸಾರ್ವಜನಿಕರಿಗೆ ಕಚೇರಿಯ ಪರದಾಟದಿಂದ ಮುಕ್ತಿ ನೀಡಲಿದೆ.

ಮಧ್ಯವರ್ತಿಗಳಿಗೆ ಕಡಿವಾಣ
ತಂತ್ರಾಂಶದಲ್ಲಿ ಆನ್‌ನ್‌ಲೈನ್‌ನಲ್ಲಿ ಶುಲ್ಕ ಪಾವತಿ ಅವಕಾಶ ಕಲ್ಪಿಸಿರುವುದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಬಹುದು. 30ಗಿ40 ವಿಸ್ತೀರ್ಣದ (1,200 ಚ.ಅ) ನಿವೇಶನದಲ್ಲಿ ಮನೆ ಕಟ್ಟುವವರಿಗೆ ತಂತ್ರಾಂಶ ಹೆಚ್ಚಿನ ಅನುಕೂಲವಾಗಲಿದೆ.ಕಟ್ಟಡ ನಿರ್ಮಾಣ, ಭೂ ಪರಿವರ್ತನೆ, ಬಡಾವಣೆ ನಿರ್ಮಾಣಕ್ಕಾಗಿ ಎನ್‌ಓಸಿ ಪಡೆಯಲು ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ.

ದಿನಾಂಕ ಮುಂದೂಡಲಾಗಿದೆ
ನಿರ್ಮಾಣ ತಂತ್ರಾಂಶ ಜೂ. 11ರಂದು ಲೋಕಾರ್ಪಣೆಯಾಗಬೇಕಾಗಿತ್ತು. ಸಾಹಿತಿ ಗಿರೀಶ್‌ ಕಾರ್ನಾಡ್‌ ನಿಧನದಿಂದಾಗಿ ಕಾರ್ಯಕ್ರಮ ರದ್ದಾಗಿದೆ.

ಅರ್ಜಿ ಸಲ್ಲಿಕೆ ಹೇಗೆ ?
ವೆಬ್‌ ಪೋರ್ಟಲ್‌ನಲ್ಲಿ ಕಟ್ಟಡ ನಿರ್ಮಾಣದ ಅನುಮತಿ ಬಯಸುವ ಬಳಕೆದಾರರು ಜಿಲ್ಲೆ, ಸ್ಥಳೀಯ ಸಂಸ್ಥೆ ಹೆಸರು, ವಾರ್ಡ್‌ ಸಂಖ್ಯೆ, ಕಟ್ಟಡ ಬಳಕೆ ಉದ್ದೇಶ, ಕಟ್ಟಡ ಪರವಾನಿಗೆ ಸಲ್ಲಿಸುತ್ತಿರುವ ಕಾರಣ, ಅರ್ಜಿದಾರರ ಹೆಸರು, ಕಟ್ಟಡ ಅಸ್ತಿತ್ವದಲ್ಲಿ ಇದೆ ಅಥವಾ ಇಲ್ಲ ಎನ್ನುವುದರ ಕುರಿತು ಅರ್ಜಿಯನ್ನು ಸಿದ್ಧಪಡಿಸಿ, ಸಂಬಂಧಪಟ್ಟ ದಾಖಲಾತಿ ಆನ್‌ಲೈನಲ್ಲಿ ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆ ಬಳಿಕ, ಸಂಬಂಧಪಟ್ಟ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ.

Advertisement

ಎಲ್ಲಿ ಅರ್ಜಿ ಸಲ್ಲಿಸಬೇಕು ?
ಸಾರ್ವಜನಿಕರ ಅಂತರ ಜಾಲತಾಣದಲ್ಲಿ ಡಿಡಿಡಿ.ಞrc.ಜಟv.ಜಿn ಅಥವಾ ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂ.ಅಧಿಕೃತ ವೆಬ್‌ ಪೋರ್ಟಲ್‌ನಲ್ಲಿ ನಾಗರೀಕ ಆನ್‌ಲೈನ್‌ ಸೇವೆಗಳ ವಿಭಾಗದಲ್ಲಿ ಆಳವಡಿಸಿದ ಹೊಸ ತಂತ್ರಾಂಶ “ನಿರ್ಮಾಣ’ (ಕಟ್ಟಡ ಪರವಾನಿಗೆ) ಆಯ್ಕೆ ಮಾಡಿ ಅರ್ಜಿ ಸಲ್ಲಿಸ ಬಹುದಾಗಿದೆ.

ಆನ್‌ಲೈನಲ್ಲಿ ಶುಲ್ಕ ಪಾವತಿ
ದಾಖಲೆಗಳು ಸಮರ್ಪಕವಾಗಿದ್ದಲ್ಲಿ 15ದಿನಗಳೊಳಗಾಗಿ ಅನುಮತಿ ಸಿಗುತ್ತದೆ. ಅನಂತರ ನಿಗದಿತ ಶುಲ್ಕವನ್ನು ಪಾವತಿಸಿದರೆ ಆನ್‌ಲೈನ್‌ ಮೂಲಕವೇ ಡಿಜಿಟಲ್‌ ಸಹಿಯುಳ್ಳ ಅನುಮತಿ ಪತ್ರ ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next