Advertisement
ಐತಿಹಾಸಿಕ ಸ್ಥಳಸೀರೆ ನದಿಯ ತಟದಲ್ಲಿ ಪ್ರಕೃತಿ ರಮಣೀಯ ವಾದ ಸ್ಥಳದಲ್ಲಿ ಇರುವ ಇದರ ಸೌಂದರ್ಯವನ್ನು ಮಳೆಗಾಲದಲ್ಲಿ ಸವಿದಷ್ಟು ಸಾಲದು. ಅಂತಹ ವಾತಾವರಣ ಇಲ್ಲಿನದ್ದು. ಇಲ್ಲಿ ಬಿಸಿ ನೀರು ಇರುವ ಕಾರಣಕ್ಕೆ ಇದೊಂದು ಪವಿತ್ರ ಹಾಗೂ ಐತಿಹಾಸಿಕ ಸ್ಥಳವಾಗಿ ಪರಿಗಣಿತವಾಗಿದೆ. ಸಲ್ಪಟ್ಟಿದೆ. ವಿಶೇಷ ದಿನಗಳಲ್ಲಿ ಇಲ್ಲಿ ತೀರ್ಥ ಸ್ನಾನವೂ ನಡೆಯುತ್ತದೆ. ಕೆರೆಯ ಪಕ್ಕದಲ್ಲಿ ಯಾವಾಗ ಕೊಳವೆ ಬಾವಿಗಳನ್ನು ತೆಗೆದರೋ ಅಂದಿನಿಂದ ಕೆರೆಯ ಬಿಸಿ ನೀರು ಬರಿದಾಗಿದೆ. ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರು ತುಂಬುವ ವೇಳೆ ಮತ್ತೆ ಕೊಳ ತುಂಬುತ್ತದೆ. ಮಳೆ ಇರಲಿ, ಚಳಿ ಇರಲಿ ಈ ಕೊಳದ ನೀರು ಸದಾ ಬಿಸಿಯಾಗಿಯೇ ಇರುತ್ತದೆ. ಇದರ ನೀರು ಬಿಸಿಯಾಗಲು ವೈಜ್ಞಾನಿಕ ಕಾರಣವೇ ಇದೆ. ಬಿಸಿ ನೀರು ಇರುವ ಕಾರಣಕ್ಕೆ ಈ ಸ್ಥಳಕ್ಕೆ ತುಳುವಿನಲ್ಲಿ ಬೇಂದ್ರ್ ತೀರ್ಥ ಎಂದು ಕರೆಯುತ್ತಿದ್ದು, ಸ್ಥಳಕ್ಕೆ ಧಾರ್ಮಿಕ ಪಾವಿತ್ರ್ಯವೂ ಇದೆ.
ಪ್ರಸಿದ್ಧಿ ಪಡೆದ ಬಿಸಿ ನೀರಿನ ಬುಗ್ಗೆ ಬೇಂದ್ರ್ ತೀರ್ಥವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಲು ಪಂಚಾ ಯತ್ ವತಿಯಿಂದ ಸಂಬಂಧಿ ಸಿದ ಇಲಾಖೆ, ಜನಪ್ರತಿನಿಧಿ ಗಳಿಗೆ ನಿರ್ಣಯ ಕಳಿಸಲಾಗಿತ್ತು. ಆದರೆ ಅಧಿಕಾರಿಗಳು, ಇಲಾಖೆಗಳು ಸ್ಪಂದಿಸದೇ ಇರುವುದು ಈ ಪ್ರದೇಶದ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗಿದೆ ಎನ್ನಲಾಗುತ್ತಿದೆ.
Related Articles
ಸ್ಥಳವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕೆಂಬ ಆಗ್ರಹ ಕೇಳುತ್ತಿದ್ದರೂ ಈವರೆಗೂ ಅದು ಕೈಗೂಡಿಲ್ಲ. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕೊಳವನ್ನು ದುರಸ್ತಿ ಮಾಡಿ ಸುತ್ತಲೂ ಕಲ್ಲಿನ ಆವರಣವನ್ನು ನಿರ್ಮಿಸಲಾಗಿದೆ. ವಿಶ್ರಾಂತಿ ಕೊಠಡಿ ಮತ್ತು ಬಟ್ಟೆ ಬದಲಿಸುವ ಕೊಠಡಿಗಳನ್ನು ನಿರ್ಮಿಸಲಾಗಿದ್ದರೂ, ಸೂಕ್ತ ನಿರ್ವಹಣೆ ಇಲ್ಲದೆ ಅವು ಉಪಯೋಗ ಶೂನ್ಯವಾಗಿದೆ. ಕೆಲವೊಂದು ಕೋಣೆಗಳು ಮುರಿದು ಬಿದ್ದು ವರ್ಷಗಳೇ ಕಳೆದಿದೆ. ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡುವುದೇ ಇಲ್ಲ.
Advertisement
ಗ್ರಾ.ಪಂ.ನಿಂದ ಪೂರ್ಣ ಸಹಕಾರಬೆಂದ್ರತೀರ್ಥ ಅಭಿವೃದ್ಧಿಗೆ ಸಂಬಂಧಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವ ಮಾಡಲಾಗುವುದು. ರಸ್ತೆ ಅಭಿವೃದ್ಧಿಗೆ ಅನುದಾನ ಇರಿಸಲಾಗುವುದು. ಪ್ರವಾಸೋದ್ಯಮ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರವಾಸಿ ತಾಣವಾಗಿ ಮಾಡಲು ಇಲಾಖೆಗೆ ಪಂಚಾಯತ್‌ನಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು.
– ಶೈಲಜಾ, ಪಿಡಿಒ, ಬೆಟ್ಟಂಪಾಡಿ ಗ್ರಾ.ಪಂ.