Advertisement
ಹನೂರು ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಜೆಡಿಎಸ್ ಪಕ್ಷದವತಿಯಿಂದ ಆಯೋಜಿಸಲಾಗಿದ್ದ ಜನತಾ ಜಲಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿ ಅವರು ಈ ರಾಜ್ಯದಲ್ಲಿ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ 4ಲಕ್ಷ ಕೋಟಿಯಿಂದ 5 ಲಕ್ಷ ಕೋಟಿ ಅನುದಾನದ ಅವಶ್ಯಕತೆಯಿದೆ. ಆದರೆ ಪ್ರಸ್ತುತ ಸರ್ಕಾರಗಳು 8ಸಾವಿರ ಕೋಟಿ ಅನುದಾನವನ್ನಷ್ಟೇ ಖರ್ಚು ಮಾಡುತ್ತಿವೆ.ಇದೇ ರೀತಿಯಾದರೆ ಯೋಜನೆಗಳು ಪೂರ್ಣಗೊಳ್ಳಲು ಕನಿಷ್ಠ 100 ವರ್ಷಗಳಾದರು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷಕ್ಕೆ ಪೂರ್ಣಬಹುಮತದ ಅಧಿಕಾರ ನೀಡಿದಲ್ಲಿ 5 ವರ್ಷಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
Related Articles
Advertisement
2 ಬಾರಿಯೂ ಅಲ್ಪಾವಧಿ ಸರ್ಕಾರ : ಈ ರಾಜ್ಯದಲ್ಲಿ ನಾಣು 2 ಬಾರಿ ಸರ್ಕಾರ ರಚನೆ ಮಾಡಿದ್ದು ಒಮ್ಮೆ ಬಿಜೆಪಿ ಜೊತೆ ಮತ್ತೊಮ್ಮೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದೆವು. ಆದರೆ ಈ 2 ಸರ್ಕಾರಗಳೂ ಅಲ್ಪಾಯುಷಿ ಸರ್ಕಾರಗಳಾಗಿದ್ದು ನನ್ನ ಮನಸ್ಸಿನಲ್ಲಿದ್ದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅಧಿಕಾರ ನೀಡಿದಲ್ಲಿ 6 ಸಾವಿರ ಗ್ರಾ.ಪಂ ಕೇಂದ್ರ ಸ್ಥಾನಗಳಲ್ಲಿಯೂ 30 ಬೆಟ್ ವ್ಯವಸ್ಥೆಯೊಂದಿಗೆ ಅಗತ್ಯ ಆರೋಗ್ಯ ಸೇವೆ, ಉಚಿತ ಶಿಕ್ಷಣಕ್ಕಾಗಿ ಎಲ್.ಕೆ.ಜಿ ಯಿಂದ ದ್ವಿತೀಯ ಪಿಯುಸಿವರೆಗೆ ಕನ್ನಡ ಮತ್ತ ಇಂಗ್ಲೀಷ್ ಮಾಧ್ಯಮಗಳಲ್ಲಿ ಶಿಕ್ಷಣ ನೀಡುವ ಶಾಲೆ ತೆರೆಯುವ ಯೋಜನೆ, ಪ್ರತಿ ಕುಟುಂಬಕ್ಕೂ ನಿವೇಶನ ನೀಡಿ ಮನೆ ನಿರ್ಮಾಣ ಮಾಡಿಕೊಡುವುದು, ರೈತರಿಗೆ ಉಚಿತ ಬಿತ್ತನೆ ಬೀಜ, ರಸಗೊಬ್ಬರ ನೀಡುವ ಯೋಜನೆ ಸೇರಿದಂತೆ ಪಂಚರತ್ನ ಯೋಜನೆಗಳನ್ನು ಜಾರಿಗಳಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಟಿ.ನರಸೀಪುರ ಶಾಸಕ ಅಶ್ವಿನ್‍ಕುಮಾರ್, ವಿ.ಪ.ಸದಸ್ಯ ಮಂಜೇಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ಶ್ರೀನಿವಾಸ್, ನರಸಿಂಹ, ಮುಳ್ಳೂರು ಶಿವಮಲ್ಲು, ಸಯ್ಯದ್ ಅಕ್ರಂ, ಜಸೀಂ, ಮಹೇಶ್‍ಗೌಡ, ಉಷಾ, ಶಾಗ್ಯ ಬಾಬು, ರವೀಂದ್ರ ಇನ್ನಿತರ ಮುಖಂಡರು ಹಾಜರಿದ್ದರು.
ಬಂಡಾಯದ ಬಿಸಿ: ಜೆಡಿಎಸ್ ಪಕ್ಷದಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಂಗನಲ್ಲೂರು ಶಿವಪ್ರಕಾಶ್‍ಬಾಬು, ಅವರ ಪುತ್ರ ಸತ್ತೇಗಾಲ ಜಿ.ಪಂ ಟಿಕೆಟ್ ಆಕಾಂಕ್ಷಿ ಚನ್ನೇಶ್‍ಗೌಡ, ಹನೂರು ಪ.ಪಂ ಸದಸ್ಯ ಮಹೇಶ್, ಪವಿತ್ರಾ ಪ್ರಸನ್ನ ಕುಮಾರ್, ನಾಗೇಂದ್ರ, ಸ್ವಾಮಿಗೌಡ, ಪಾಳ್ಯ ಸಿದ್ದಪ್ಪಾಜಿ ಹಾಗೂ ಇನ್ನಿತರ ಮುಖಂಡರು ಗೈರು ಹಾಜರಾಗಿದ್ದರು. ಈ ಮೂಲಕ ಕೆಲವರು ಮಂಜುನಾಥ್ ಅವರ ಕಾರ್ಯವೈಖರಿ ಬಗ್ಗೆ ಗೈರುಹಾಜರಾಗುವ ಮುಖೇನ ಅಸಮಾಧಾನ ವ್ಯಕ್ತಪಡಿಸಿದರು. ಈ ಮೂಲಕ ಜೆಡಿಎಸ್ ಪಕ್ಷದಲ್ಲಿಯೂ ಎಲ್ಲವೂ ಸರಿಯಿಲ್ಲ ಎನ್ನುವ ಸಂದೇಶ ರವಾನೆಯಾಯಿತು.