ಚಿಕ್ಕಮಗಳೂರು: ಜಿಲ್ಲೆಯಲ್ಲಿ ಲೋಕೋಪಯೋಗಿ·ಇಲಾಖೆಯಿಂದ ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್‌ಗಳನ್ನುಗುರುತಿಸಲಾಗಿದ್ದು, ಕಾಮಗಾರಿಯನ್ನು ನಿಗದಿತ ಅವ ಧಿಯೊಳಗೆ ಮುಗಿಸಿ ವರದಿ ಸಲ್ಲಿಸುವಂತೆ ಅ ಧಿಕಾರಿಗಳಿಗೆಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್ ತಿಳಿಸಿದರು.
ಗುರುವಾರ ನಗರದ ಜಿಲ್ಲಾ ಧಿಕಾರಿ ಕಚೇರಿಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಲಾಕ್ ಸ್ಪಾಟ್‌ಗಳಲ್ಲಿ ಶಾಲಾ ಪ್ರದೇಶವನ್ನು ಸೂಚಿಸುವ ಸೂಚನಾ ಫಲಕ,ಅಪಘಾತ ಸ್ಥಳಗಳನ್ನು ಸೂಚಿಸುವ ಸೂಚನಾ ಫಲಕಅಳವಡಿಸಿ ನಿಗದಿತ ಅವ ಧಿಯೊಳಗೆ ಡಾಂಬರೀಕರಣಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು.
ಮೂಡಿಗೆರೆಯಿಂದ ಕಡೂರು ಸಂಪರ್ಕಿಸುವರಾಷ್ಟ್ರೀಯ ಹೆದ್ದಾರಿ 173 ರಲ್ಲಿ 16 ಬ್ಲಾಕ್ ಸ್ಪಾಟ್‌ಗಳಿದ್ದು ಅದರಲ್ಲಿ 10 ಕಾಮಗಾರಿ ಮುಗಿದಿದೆ. ಇನ್ನುಳಿದಆರು ಬ್ಲಾಕ್ ಸ್ಪಾಟ್‌ಗಳನ್ನು ನಿಗ ದಿತ ಕಾಲಮಿತಿಯಲ್ಲಿಕಾಮಗಾರಿ ಪೂರ್ಣಗೊಳಿಸುವಂತೆ ಅಧಿ ಕಾರಿಗಳಿಗೆಸೂಚಿಸಿದರು.
ಜಿಪಂ ಕಚೇàರಿಯಿಂದ ಜಿಲ್ಲಾ ಧಿಕಾರಿ ಕಚೇರಿಸಂಪರ್ಕಿಸುವ ರಸ್ತೆ ಕಾಮಗಾರಿ ಮಂದಗತಿಯಲ್ಲಿಸಾಗುತ್ತಿದ್ದು, ಮುಖ್ಯಮಂತ್ರಿಗಳು ಹಾಗೂ ಸಚಿವರುನಗರಕ್ಕೆ ಭೇಟಿ ನೀಡಿದಾಗ ಈ ರಸ್ತೆಯ ಮೂಲಕಸಂಚರಿಸುವುದು ಸಾಮಾನ್ಯ. ಆದ್ದರಿಂದ ಈ ರಸ್ತೆಯಕಾಮಗಾರಿಯನ್ನು ಮಾರ್ಚ್ ಅಥವಾ ಏಪ್ರಿಲ್‌ಒಳಗಾಗಿ ಸಂಪೂರ್ಣವಾಗಿ ಪೂರ್ಣಗೊಳಿಸುವಂತೆಸೂಚಿಸಿದರು.
ಕಡೂರು ಮತ್ತು ಶಿವಮೊಗ್ಗ ಸಂಪರ್ಕಿಸುವ ರಾಷ್ಟ್ರೀಯಹೆದ್ದಾರಿ 206 ರಲ್ಲಿ 21 ಬ್ಲಾಕ್ ಸ್ಪಾಟ್‌ಗಳಿದ್ದು, ಅವುಗಳಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದ ಅವರು,ಚಿಕ್ಕಮಗಳೂರಿನ ಕೆಲವು ಪ್ರದೇಶಗಳಲ್ಲಿ ಹೆಚ್ಚು ಮಳೆಆಗುವುದರಿಂದ ಮಳೆ ಪ್ರಾರಂಭ ವಾದಾಗ ಕಾಮಗಾರಿಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆದಷ್ಟುಬೇಗ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಮೊದಲುಕಾಮಗಾರಿ ಪೂರ್ಣಗೊಳಿಸಬೇಕು ಹಾಗೂ ಮುಖ್ಯರಸ್ತೆಗಳಿಗೆ ಹಳ್ಳಿಗಳು ಸಂಪರ್ಕಿಸುವ ಕಡೆಗಳಲ್ಲಿ ಹಂಪ್‌ಗಳನ್ನು ಹಾಕಿ ಎಂದು ಸಂಬಂ ಧಿಸಿದ ಅಧಿ ಕಾರಿಗಳಿಗೆತಿಳಿಸಿದರು.
ಪೊಲೀಸ್ ಇಲಾಖೆಗೆ ನೀಡುವಂತಹ ಬೈಕ್‌ಆಂಬ್ಯುಲೆನ್ಸ್ ಖರೀದಿಗಾಗಿ ಸರ್ಕಾರ ರೂ. 8.33ಲಕ್ಷಅನುದಾನ ಬಿಡುಗಡೆ ಮಾಡಿದ್ದು, ಅಗತ್ಯವಿರುವಷ್ಟುಬೈಕ್ ಆಂಬ್ಯುಲೆನ್ ಗಳನ್ನು ಮಾತ್ರ ಬಳಸಿಕೊಳ್ಳುವಂತೆಹೆಚ್ಚುವರಿ ಪೊಲೀಸ್ ಅ ಧೀಕ್ಷಕಿ ಶೃತಿ ಅವರಿಗೆಸೂಚಿಸಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಜಿಲ್ಲಾರಸ್ತೆಗಳಲ್ಲಿರುವ ಬ್ಲಾಕ್ ಸ್ಪಾಟ್‌ಗಳು ಮತ್ತು ಅವುಗಳಕಾಮಗಾರಿಗಳ ಬಗ್ಗೆ ಪ್ರಾದೇಶಿಕ ಸಾರಿಗೆ ಅ ಧಿಕಾರಿಹಾಗೂ ಸದಸ್ಯ ಕಾರ್ಯದರ್ಶಿ ಮುರುಗೇಂದ್ರಬಿ.ಶಿರೋಳ್ಕರ್ ಮಾಹಿತಿ ನೀಡಿದರು.ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ವತಿಯಿಂದ 32ನೇರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಪೋಸ್ಟರನ್ನುಬಿಡುಗಡೆ ಮಾಡಿದರು. ಸಭೆಯಲ್ಲಿ ಹೆಚ್ಚುವರಿಪೊಲೀಸ್ ಅ ಧೀಕ್ಷಕಿ ಶೃತಿ ಹಾಗೂ ಲೋಕೋಪಯೋಗಇಲಾಖೆಯ ಅಧಿ ಕಾರಿಗಳು ಇದ್ದರು.
ಓದಿ :
ರೈತರ ಹೋರಾಟ ಬೆಂಬಲಿಸಿ ನಾಳೆ ಹೆದ್ದಾರಿ ತಡೆ