ಚಳ್ಳಕೆರೆ: ತಾಲೂಕಿನ ನಗರಂಗೆರೆ ಗ್ರಾಮ ದೇವತೆ ಶ್ರೀ ಮಾರಿಕಾಂಬಾ (ಮಾರಮ್ಮ) ದೇವಿಯ ಜಾತ್ರೆ ಫೆ. 1ರಿಂದ 6ರ ತನಕ ನಡೆಯಲಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಇದಾಗಿದ್ದು, ಜಾತ್ರೆ ಹಿನ್ನೆಲೆಯಲ್ಲಿ ನಗರಂಗೆರೆ ಗ್ರಾಮಕ್ಕೆ ಹೊರಗಿನ ಯಾವ ವ್ಯಕ್ತಿಯೂ ಸಹ ಪ್ರವೇಶ ಮಾಡುವಂತಿಲ್ಲ. ಹಾಗಾಗಿ ಗ್ರಾಮದ ನಾಲ್ಕೂ ದಿಕ್ಕುಗಳಲ್ಲಿ ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಲಾಗಿದೆ. ಯಾರಾದರೂ ನಿಯಮ ಮೀರಿ ಗ್ರಾಮದ ಒಳಗೆ ಪ್ರವೇಶಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬುಧವಾರ ಜಾತ್ರೆಯ ಅಂತಿಮ ದಿನವಾಗಿದ್ದು, ಶಾಸಕ ಟಿ. ರಘುಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ, ಅಂಗಡಿ ರಮೇಶ್, ಯರ್ರಮ್ಮ, ಹಿದಾಯತ್, ಗ್ರಾಮದ ಮುಖಂಡರಾದ ಸಿ. ಓಬಣ್ಣ, ಪುಟ್ಟಲಿಂಗಪ್ಪ, ಓಂಕಾರಪ್ಪ ಮೊದಲಾದವರು ಪಾಲ್ಗೊಳ್ಳುವರು. ಫೆ. 1 ರಂದು ಗಂಗಾ ಪೂಜೆ, 2 ರಂದು ದೇವಿಯ ಪ್ರತಿಷ್ಠಾಪನೆ ಮತ್ತು ಮಹಿಷೋತ್ಸವ, 3 ರಂದು ಗ್ರಾಮಸ್ಥರಿಂದ ಹಿಟ್ಟಿನ ಆರತಿ, 4 ರಂದು ಆದಿಕರ್ನಾಟಕ ಸಮಾಜದ ಭಕ್ತರಿಂದ ಹಿಟ್ಟಿನ ಆರತಿ, 5 ರಂದು ಅಸಾದಿ ಕಾರ್ಯಕ್ರಮ, 6 ರಂದು ಶ್ರೀದೇವಿಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಓದಿ : ಸುರಕ್ಷತೆಗಾಗಿ ಹೆಲ್ಮೆಟ್‌ಕಡ್ಡಾಯ: ಶಿವಮೂರ್ತಿ