Advertisement

ಕೃಷಿ ಸಚಿವರ ರಾಜೀನಾಮೆಗೆ ಒತ್ತಾ ಯ

05:57 PM Jan 28, 2021 | Team Udayavani |

ಬಳ್ಳಾರಿ: ದೆಹಲಿ ಪ್ರತಿಭಟನಾಕಾರರು ರೈತರಲ್ಲ. ಭಯೋತ್ಪಾದಕರು ಎಂದು ಜರಿದಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರ ಹೇಳಿಕೆಯನ್ನು ಖಂಡಿಸಿ ಅಖೀಲ ಭಾರತ ರೈತ ಹೋರಾಟ ಸಮನ್ವಯ ಸಮಿತಿ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಬಿ.ಸಿ. ಪಾಟೀಲ್‌ ರಾಜೀನಾಮೆ ನೀಡಬೇಕು
ಎಂದು ಒತ್ತಾಯಿಸಿದರು.

Advertisement

ರೈತ ಸಂಘಟನೆಗಳ ಪ್ರಮುಖರು, ಸಚಿವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರಲ್ಲದೆ, ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಸಚಿವ ಬಿ.ಸಿ.ಪಾಟೀಲ್‌ ಉದ್ಧಟತನದಲ್ಲಿ ವರ್ತಿಸುವುದನ್ನು ಬಿಡಬೇಕು ಎಂದು ಎಚ್ಚರಿಸಿದರು. ಇದೇ ವೇಳೆ ಮಾತನಾಡಿದ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆರ್‌.ಮಾಧವ ರೆಡ್ಡಿ, ಕೃಷಿ ಸಚಿವ ಬಿ.ಸಿ. ಪಾಟೀಲ್‌ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಮಾತನಾಡಿದ್ದಾರೆ.

ಸಚಿವರ ಹೇಳಿಕೆ ಅವರ ಅವಿವೇತಕನದ ಪರಮಾವ ಧಿಯನ್ನು ತೋರಿಸುತ್ತದೆ. ದೆಹಲಿಯಲ್ಲಾಗಿರುವ ಅಹಿತಕರ ಘಟನೆಯನ್ನು ರೈತ ಸಂಘಟನೆಗಳು ಬೆಂಬಲಿಸುವುದಿಲ್ಲ. ಆದರೆ ನೈಜ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸವಾಗಿದೆ. ದುಷ್ಕೃತ್ಯ ಹಿಂದಿನ ಕಾಣದ ಕೈಗಳು ಯಾವವು ಎಂಬುದು ಗೊತ್ತಾಗಬೇಕಾಗಿದೆ. ಆದರೆ, ಇದ್ಯಾವುದನ್ನು ಪರಿಗಣಿಸದೆ, ರೈತರು ಭಯೋತ್ಪಾದಕರು ಎಂದು ಹೋಲಿಕೆ ಮಾಡಿರುವ ಬಿ.ಸಿ.ಪಾಟೀಲ್‌, ಕೃಷಿ ಸಚಿವರಾಗಿ ಕಾರ್ಯಭಾರ ಮಾಡಲು ಅಯೋಗ್ಯರಾಗಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೃಷಿ ಸಚಿವರನ್ನು ಕೂಡಲೇ ಬದಲಾಯಿಸಬೇಕು. ರೈತಪರ ಕಾಳಜಿಯುಳ್ಳವರಿಗೆ ಮಹತ್ವದ ಕೃಷಿ ಖಾತೆಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರಾಂತ ರೈತ ಸಂಘದ ಜೆ. ಸತ್ಯಬಾಬು, ಸೋಮಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ಓದಿ : Engineering ಮುಗಿದ ಕೂಡಲೇ ನಿಮಗೆ ಕೆಲಸ ಸಿಗಬೇಕೇ?!

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next