ಕೂವೀಡ್ ನೆರವಿನ ನಾಟಕ ಪ್ರಚಾರಕಷ್ಟೇ ಸೀಮಿತವಾಯ್ತಾ ? ಜನರ ಹಸಿವು ನೀಗಿಸುವಲ್ಲಿ ಜನಪ್ರತಿ ನಿಧಿಗಳ ನಿರ್ಲಕ್ಷ್ಯ. ಉಗ್ರಾಣದಲ್ಲಿ ಹುಳು ಬಿದ್ದು ಹಾಳಾದ ಆಹಾರ ಸಾಮಾಗ್ರಿ. ಕುದೂರು . ಕೂವೀಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನತೆಗೆ ಹಂಚಬೇಕೆಂದು ಸಿದ್ಧಪಡಿಸಿದ್ದ ಸಾವಿರಾರು ಆಹಾರ ಕಿಟ್ ಗಳು ವಿತರಣೆಯಾಗದೆ ಹುಳು ಹಿಡಿದುಹಾಳಾಗಿರುವ ಘಟನೆ ರಾಮನಗರ ಜಿಲ್ಲೆ.ಮಾಗಡಿ ತಾಲ್ಲೂಕು.ಕುದೂರು ಹೋಬಳಿ ಯ ಸುಗ್ಗನಹಳ್ಳಿ ಗ್ರಾಮದಲ್ಲಿ ನೆಡೆದಿದೆ. ಸುಗ್ಗನಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸಭಾ ಭವನದಲ್ಲಿಸಾವಿರಾರು ಆಹಾರ ಕಿಟ್ ಗಳನ್ನು ಸಂಗ್ರಹಿಸಿಡಲಾಗಿತ್ತು.ಭವನದ ಬಾಗಲು ಮತ್ತು ಕಿಟಕಿಯಿಂದ ಹುಳುಗಳು ಹರಿದಾಡುತ್ತಿವೆ. ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಡಾ.ರಂಗಧಾಮಯ್ಯ ಕೂವೀಡ್ ಸಂದರ್ಭದಲ್ಲಿ ಮಾಗಡಿ ತಾಲ್ಲೂಕಿನ ಬೇರೆ ಬೇರೆ ಕಡೆ ಕೂವೀಡ್ ಸಂಕಷ್ಟದಲ್ಲಿ ಸಿಲುಕಿದ ಜನರಿಗೆ ಬಿಜೆಪಿ ಪಕ್ಷದ ನಾಯಕರ ಪೂಟೂಗಳನ್ನು ಹಾಕಿ ಆಹಾರ ಕಿಟ್ ಗಳನ್ನು ಹಂಚಿ ನೆರವಿನ ಹಸ್ತ ಚಾಚಿದ್ದರು.ಸುಗ್ಗನಹಳ್ಳಿ ಗ್ರಾಮದ ಬಡವರಿಗೆ ಹಂಚಬೇಕೆಂದು ಸಾವಿರಾರು ದಿನಸಿ ಕಿಟ್ ಗಳನ್ನು ಸಿದ್ದಪಡಿಸಿದ್ದರು.ಆದರೆ ಆ ಪ್ರಾತ್ಯಂದ ಜನರಿಗೆ ದಿನಸಿ ಕಿಟ್ ಗಳನ್ನು ಹಂಚದ ಕಾರಣ ಅದಕ್ಕೆ ಹುಳು ಹಿಡಿದು ಹಾಳಾಗಿದೆ.