Advertisement
ಪಂದ್ಯಾಟದಲ್ಲಿ ಸುಮಾರು 6 ಸಾವಿರ ಜನರು ಕುಳಿತುಕೊಳ್ಳಲು ಗ್ಯಾಲರಿಗಳ ವ್ಯವಸ್ಥೆ, ಸ್ಟೇಡಿಯಂನಲ್ಲಿ ಸುಮಾರು 5 ಸಾವಿರ ಜನರು ವೀಕ್ಷಿಸಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 25 ಸಾವಿರ ಜನರು ಪಂದ್ಯಾಟವನ್ನು ವೀಕ್ಷಿಸುವ ನಿರೀಕ್ಷೆ ಮಾಡಲಾಗಿದೆ. ಅಟಲ್ ಉತ್ಸವದ ಮೆರುಗು ಹೆಚ್ಚಿಸಲು ಉಡುಪಿ ನಗರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಕಲ್ಸಂಕದಿಂದ ಎಂಜಿಎಂ ವೆರೆಗೆ ಪ್ಷಸ ಧ್ವಜ, ಪತಾಕೆಗಳು, ಬ್ಯಾನರ್‌ಗಳನ್ನು ಅಳವಡಿಸಿ ಶೃಂಗರಿಸಲಾಗಿದೆ.
ಕೇಂದ್ರದ ಯುವ ವ್ಯವಹಾರ ಮತ್ತು ಕ್ರೀಡಾ, ಮಾಹಿತಿ ತಂತ್ರಜ್ಞಾನ ಹಾಗೂ ಪ್ರಸಾರ ಇಲಾಖೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಅಟಲ್ ಟ್ರೋಫಿಯನ್ನು ಉದ್ಘಾಟಿಸಲಿದ್ದು, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಾದ ದೆಹಲಿ, ಹರ್ಯಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳ ಒಟ್ಟು 12 ತಂಡಗಳು ಭಾಗವಹಿಸಲಿವೆ. ಅನುಕ್ರಮವಾಗಿ 1 ಲ.ರೂ., 75,000 ರೂ., 50,000 ರೂ., 25,000 ರೂ. ಬಹುಮಾನಗಳನ್ನು ಪ್ರಶಸ್ತಿ ಫಲಕಗಳೊಂದಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಸ್ಥಾನಗಳ ವಿಜೇತರಿಗೆ ನೀಡಲಾಗುವುದು. 5 ಅಡಿ ಎತ್ತರದ ಟ್ರೋಫಿ
ಜೀವನದ ಉದ್ದಕ್ಕೂ ನೆನಪಿಸುವಂತೆ ಸುಮಾರು 5 ಅಡಿ ಎತ್ತರದ ಆಕರ್ಷಕ ಟ್ರೋಫಿಗಳನ್ನು ಬಹುಮಾನವಾಗಿ ಕೊಡಲಾಗುವುದು. ಡಿ. 24ರ ಸಂಜೆ 5ಕ್ಕೆ ಮಹಿಳಾ ಕಬಡ್ಡಿ ಆರಂಭಗೊಳ್ಳಲಿದ್ದು, ಅನಂತರ ಉದ್ಘಾಟನೆ ಸಮಾರಂಭ ನೆರವೇರಲಿದೆ. ಕಾರ್ಯಕರ್ತರು ತಯಾರಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಅಟಲ್ ಉತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
Related Articles
ಪ್ರಸ್ತುತ ಪ್ರೊ ಕಬಡ್ಡಿ ಜನಪ್ರಿಯತೆಯನ್ನು ಗಳಿಸುತ್ತಿರುವ ನೆಲೆಯಲ್ಲಿ ಈ ಪಂದ್ಯಾಟವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಪಂದ್ಯಾಟದಲ್ಲಿ ಸುಮಾರು 25 ಸಾವಿರಕ್ಕೂ ಮಿಕ್ಕಿ ಕ್ರೀಡಾಸಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದ್ದಾರೆ.
Advertisement