Advertisement

ದಶಕದ ಬಳಿಕ ಧರ್ಮಶಾಲಾದಲ್ಲಿ IPL

11:49 PM May 16, 2023 | Team Udayavani |

ಧರ್ಮಶಾಲಾ: ಹಿಮಾಚಲ ಪ್ರದೇಶದ ರಮಣೀಯ ತಾಣವಾದ ಧರ್ಮಶಾಲಾ ದಶಕದ ಬಳಿಕ ಐಪಿಎಲ್‌ ಪಂದ್ಯಗಳ ಆತಿಥ್ಯ ವಹಿಸುವ ಸಂಭ್ರಮದಲ್ಲಿದೆ. ಬುಧವಾರ ಇಲ್ಲಿ ಪಂಜಾಬ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖೀ ಆಗಲಿವೆ.

Advertisement

12 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಈಗಾಗಲೇ ಕೂಟದಿಂದ ಹೊರಬಿದ್ದಿದೆ. ಆದರೆ ಹನ್ನೆರಡಲ್ಲಿ 6 ಗೆಲುವು ಕಂಡಿರುವ ಪಂಜಾಬ್‌ ಮುಂದೆ ಇನ್ನೂ ಪ್ಲೇ ಆಫ್ ಅವಕಾಶ ಜೀವಂತವಾಗಿದೆ. ಹೀಗಾಗಿ ಶಿಖರ್‌ ಧವನ್‌ ಪಡೆಗೆ ಇದು ಅತ್ಯಂತ ಮಹತ್ವದ ಪಂದ್ಯ. ಗೆದ್ದರಷ್ಟೇ ಕೂಟದಲ್ಲಿ ಉಳಿಗಾಲ ಎಂಬುದು ಸದ್ಯದ ಲೆಕ್ಕಾಚಾರ.

ಇದು ಪಂಜಾಬ್‌-ಡೆಲ್ಲಿ ತಂಡಗಳ ನಡು ವಿನ 2ನೇ ಸುತ್ತಿನ ಮುಖಾಮುಖೀ. ಕಳೆದ ರವಿವಾರ ವಷ್ಟೇ ಹೊಸದಿಲ್ಲಿಯಲ್ಲಿ ಮೊದಲ ಮುಖಾಮುಖೀ ಏರ್ಪಟ್ಟಿತ್ತು. ಇದನ್ನು ಪಂಜಾಬ್‌ 31 ರನ್ನುಗಳಿಂದ ಜಯಿಸಿತ್ತು. ಪ್ರಭ್‌ಸಿಮ್ರಾನ್‌ ಸಿಂಗ್‌ ಶತಕದ ನೆರವಿನಿಂದ (103) ಪಂಜಾಬ್‌ 7 ವಿಕೆಟಿಗೆ 167 ರನ್‌ ಮಾಡಿದರೆ, ಡೆಲ್ಲಿ 8ಕ್ಕೆ 136 ರನ್‌ ಗಳಿಸಿ ತವರಿನಂಗಳದಲ್ಲೇ ಮುಖಭಂಗ ಅನುಭವಿಸಿತ್ತು. ಇದಕ್ಕೆ ಸೇಡು ತೀರಿಸಿಕೊಂಡರೆ ಡೆಲ್ಲಿಗೇನೂ ಲಾಭವಿಲ್ಲ. ಆದರೆ ಪಂಜಾಬ್‌ ಹಾದಿ ಬಹುತೇಕ ಕೊನೆಗೊಳ್ಳಲಿದೆ.
ಪಂಜಾಬ್‌ಗ ಇಲ್ಲಿ ದೊಡ್ಡ ಅಂತರದ ಗೆಲುವು ಅನಿವಾರ್ಯ. ಅದರ ರನ್‌ರೇಟ್‌ ಇನ್ನೂ ಮೈನಸ್‌ನಲ್ಲಿರುವುದೇ ಇದಕ್ಕೆ ಕಾರಣ (-0.268). ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಭ್‌ಸಿಮ್ರಾನ್‌ ಹೊರತುಪಡಿ ಸಿದರೆ ಪಂಜಾಬ್‌ ಬ್ಯಾಟಿಂಗ್‌ ಸರದಿಯಲ್ಲಿ ಯಾರೂ ಕ್ಲಿಕ್‌ ಆಗಿರಲಿಲ್ಲ. ಧವನ್‌, ಲಿವಿಂಗ್‌ಸ್ಟೋನ್‌, ಜಿತೇಶ್‌ ಶರ್ಮ, ಕರನ್‌, ಹರ್‌ಪ್ರೀತ್‌ ಬ್ರಾರ್‌, ಶಾರುಕ್‌ ಖಾನ್‌ ಅವರನ್ನೊಳಗೊಂಡ ಬ್ಯಾಟಿಂಗ್‌ ಸರದಿ ದೊಡ್ಡ ಮೊತ್ತ ದಾಖಲಿಸಬೇಕಾದ ಅಗತ್ಯವಿದೆ.

ಅರ್ಷದೀಪ್‌, ಬ್ರಾರ್‌, ರಾಹುಲ್‌ ಚಹರ್‌, ಎಲ್ಲಿಸ್‌ ಅವರನ್ನೊಳಗೊಂಡ ಪಂಜಾಬ್‌ ಬೌಲಿಂಗ್‌ ವಿಭಾಗ ಪರವಾಗಿಲ್ಲ ಎಂಬಂತಿದ್ದರೂ ಇನ್ನಷ್ಟು ಘಾತಕವಾಗಬೇಕಾದುದು ಅನಿವಾರ್ಯ.

ಜೋಶ್‌ ತೋರದ ಡೆಲ್ಲಿ
ಡೆಲ್ಲಿ ಯಾವ ವಿಭಾಗದಲ್ಲೂ ಟಿ20 ಜೋಶ್‌ ತೋರಿಲ್ಲ. ಒಂದೋ, ಎರಡೋ ಪಂದ್ಯ ಹೊರತು ಪಡಿಸಿದರೆ ಈವರೆಗಿನ ಸಾಧನೆಯೆಲ್ಲ ಶೂನ್ಯ. ಪಂಜಾಬ್‌ ಎದುರಿನ ಕಳೆದ ಪಂದ್ಯವನ್ನೇ ತೆಗೆದುಕೊಳ್ಳುವುದಾದರೆ, 168 ರನ್‌ ಚೇಸಿಂಗ್‌ ವೇಳೆ 69 ರನ್ನುಗಳ ಆರಂಭಿಕ ವಿಕೆಟ್‌ ಜತೆಯಾಟದ ಬಳಿಕ 67 ರನ್‌ ಅಂತರದಲ್ಲಿ 8 ವಿಕೆಟ್‌ ಕಳೆದುಕೊಂಡು ಮುಗ್ಗರಿಸಿತ್ತು. ಹೀಗಾಗಿ ಗೆದ್ದರೂ ಒಂದೇ, ಸೋತರೂ ಒಂದೇ ಎಂಬ ಹತಾಶೆಯಲ್ಲಿದೆ ಡೆಲ್ಲಿ ಕ್ಯಾಪಿಟಲ್ಸ್‌.

Advertisement

ಪಂಜಾಬ್‌ನ ಎರಡನೇ ತವರು
ಧರ್ಮಶಾಲಾ ಪಂಜಾಬ್‌ ಕಿಂಗ್ಸ್‌ ತಂಡದ ಎರಡನೇ ತವರು. ನೆಚ್ಚಿನ ತಾಣವೂ ಹೌದು. 2013ರಲ್ಲಿ ಇಲ್ಲಿ ಎರಡು ಪಂದ್ಯಗಳನ್ನಾಡಿದ್ದ ಪಂಜಾಬ್‌ ಎರಡನ್ನೂ ಗೆದ್ದಿತ್ತು. ಒಂದು ಗೆಲುವು ಡೆಲ್ಲಿ ವಿರುದ್ಧವೇ ಬಂದದ್ದು ಗಮನಾರ್ಹ. ಅಂತರ 7 ವಿಕೆಟ್‌. ಸರಿಯಾಗಿ 10 ವರ್ಷಗಳ ಹಿಂದೆ ಈ ಮುಖಾಮುಖೀ ಏರ್ಪಟ್ಟಿತ್ತೆಂಬುದು ವಿಶೇಷ (ಮೇ 16, 2013). ಅಂದಿನ ಇನ್ನೊಂದು ಪಂದ್ಯದಲ್ಲಿ ಪಂಜಾಬ್‌-ಮುಂಬೈ ಎದುರಾಗಿದ್ದವು. ಪಂಜಾಬ್‌ 50 ರನ್‌ ಗೆಲುವು ಸಾಧಿಸಿತ್ತು.

ಅಂದಿನ ಪಂಜಾಬ್‌ ತಂಡಕ್ಕೆ ಆ್ಯಡಂ ಗಿಲ್‌ಕ್ರಿಸ್ಟ್‌ ನಾಯಕರಾಗಿದ್ದರು. ಶಾನ್‌ ಮಾರ್ಷ್‌, ಡೇವಿಡ್‌ ಮಿಲ್ಲರ್‌, ಅಜರ್‌ ಮಹಮೂದ್‌, ಪೀಯೂಷ್‌ ಚಾವ್ಲಾ, ಪ್ರವೀಣ್‌ ಕುಮಾರ್‌, ಸಂದೀಪ್‌ ಶರ್ಮ ಮೊದಲಾದ ಆಟಗಾರರನ್ನು ಹೊಂದಿತ್ತು.

ಡೆಲ್ಲಿಯ ನಾಯಕರಾಗಿದ್ದವರು ಮಾಹೇಲ ಜಯವರ್ಧನೆ. ಇಂದಿನ ನಾಯಕ ಡೇವಿಡ್‌ ವಾರ್ನರ್‌ ಕೂಡ ತಂಡದಲ್ಲಿದ್ದರು. ವೀರೇಂದ್ರ ಸೆಹವಾಗ್‌, ಉನ್ಮುಕ್‌¤ ಚಂದ್‌, ಮಾರ್ನೆ ಮಾರ್ಕೆಲ್‌ ಮೊದಲಾದವರು ಉಳಿದ ಸದಸ್ಯರಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next